ಮಡಿಕೇರಿ ಅ.10 NEWS DESK : ದಸರಾ ಜನೋತ್ಸವ ಸಂಬಂಧ ಇಂದು (ಅ.10) ಮಡಿಕೇರಿಯ ಗಾಂಧಿ ಮೈದಾನದಲ್ಲಿ ಹಗಲು ಕಬ್ಬಡಿ ಪಂದ್ಯಾವಳಿ ಹಾಗೂ ರಾತ್ರಿ ಯುವ ದಸರಾ ಕಾರ್ಯಕ್ರಮ ಮತ್ತು ಅ.11 ರಂದು ಖ್ಯಾತ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ವಾಹನಗಳಲ್ಲಿ ಆಗಮಿಸುವ ನಿರೀಕ್ಷೆ ಇದ್ದು, ರಾಜಾಸಿಟ್ ರಸ್ತೆಯ ವಾಹನ ಸಂಚಾರವನ್ನು ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿಲಾಗಿದೆ ಎಂದು ಮಡಿಕೇರಿ ಸಂಚಾರಿ ಪೊಲೀಸ್ ಠಾಣಾ ಪ್ರಕಟಣೆ ತಿಳಿಸಿದೆ. ರಸ್ತೆ ಮತ್ತು ಗಾಂಧಿ ಮೈದಾನ ಬಹಳ ಚಿಕ್ಕದಾಗಿರುವುದರಿಂದ ಪಾರ್ಕಿಂಗ್ ವ್ಯವಸ್ಥೆಗೆ ಬಹಳ ಅನಾನುಕೂಲವಾಗಿರುತ್ತದೆ. ಆದ್ದರಿಂದ ಇಂದು (ಅ.10) ಮತ್ತು ಅ.11 ರಂದು ವೇದಿಕೆಯ ಪಕ್ಕದಲ್ಲಿ VIP ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೈದಾನದಲ್ಲಿ ಕೇವಲ ಸಮಿತಿಯ ಮುಖ್ಯ ಸದಸ್ಯರುಗಳಿಗೆ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ನಾಡ ಹಬ್ಬ ದಸರಾ ಕಾರ್ಯಕ್ರಮವನ್ನು ಯಶಸ್ವಿ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲಕ್ಕಾಗಿ ಸಂಜೆ 5 ಗಂಟೆಯ ನಂತರ ರಾಜಾಸಿಟ್ ರಸ್ತೆಯ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುತ್ತದೆ. ದ್ವಿಚಕ್ರ ವಾಹನಗಳಿಗೆ ನಗರಸಭೆ ಕಾರ್ಯಾಲಯದ ಬಳಿ ಮತ್ತು ತಾಲ್ಲೂಕು ಕಚೇರಿಯ ಬಳಿ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಕೋಟೆಯ ಆವರಣದಲ್ಲಿ ತಾತ್ಕಾಲಿಕವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿರತ್ತದೆ. ಕಡ್ಡಾಯವಾಗಿ ನಿಗದಿ ಪಡಿಸಿದ ಸ್ಥಳದಲ್ಲಿಯೇ ವಾಹನಗನ್ನು ಪಾರ್ಕಿಂಗ್ ಮಾಡುವಂತೆ ಎಲ್ಲಾ ವಾಹನ ಮಾಲೀಕರು / ಚಾಲಕರು ಹಾಗೂ ಸಾರ್ವಜನಿಕರಲ್ಲಿ ಮಡಿಕೇರಿ ಸಂಚಾರಿ ಪೊಲೀಸ್ ಠಾಣಾ ಪ್ರಕಟಣೆಯಲ್ಲಿ ಕೋರಿದೆ.