









ನಾಪೋಕ್ಲು ಏ.14 NEWS DESK : ಶ್ರೀ ಮಹಾವಿಷ್ಣು ದೇವಾಲಯ(ಕೋಟ)ದಲ್ಲಿ ನವ ಕಳಸ ಪೂಜೆ ಹಾಗೂ ಹೋಮ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ಕೆಲವು ವರ್ಷಗಳ ಹಿಂದೆ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯನಡೆದು ಸ್ಥಗಿತಗೊಂಡಿದ್ದ ನಿತ್ಯಪೂಜೆಯನ್ನು ಪುನರಾರಂಭಿಸಲು ನಾಪೋಕ್ಲು (ನಾಪದೊಕ್ಕ), ಊರಿನ ಆಡಳಿತ ಮಂಡಳಿ ಹಾಗೂ ತಕ್ಕ ಮುಖ್ಯಸ್ಥರು ವಿಶೇಷ ಪೂಜೆ ನಡೆಸಿದರು. ಬಿಸು ಶುಭ ದಿನವಾದ ಇಂದಿನಿಂದ (ಸೋಮವಾರ) ದೇವಾಲಯದಲ್ಲಿ ಶ್ರೀ ಮಹಾವಿಷ್ಣು ವಿಗೆ ನಿತ್ಯ ಪೂಜೆ ಪುನರಾರಂಭಗೊಂಡಿದ್ದು, ದಿನಪ್ರತಿ ಬೆಳಿಗ್ಗೆ 8-30 ಗಂಟೆಯಿಂದ 9-30 ಗಂಟೆ ಒಳಗೆ ಭಗವತಿ ದೇವಾಲಯದ ಅರ್ಚಕ ಹರೀಶ್ ಭಟ್ ನಿತ್ಯ ಪೂಜೆ ನಡೆಸಿಕೊಡಲಿದ್ದಾರೆ ಎಂದು ಆಡಳಿತ ಮಂಡಳಿ ಪದಾದಿಕಾರಿಗಳು ತಿಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.