ಮಡಿಕೇರಿ ಅ.23 NEWS DESK : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿಯ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ವಿಶ್ವದಲ್ಲಿ ಗಾಂಧೀ ತತ್ವ ಸಿದ್ದಾಂತಗಳ ಮಹತ್ವದ ಬಗ್ಗೆ ವಿಶ್ಲೇಷಿಸಿ ಪ್ರಬಂಧ ಬರೆಯಲು ಅನುವಾಗುವಂಎ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರಬಂಧಗಳನ್ನು ಬರೆದು ಅ.31 ರೊಳಗೆ kstaessay.kannada@gmail.com and kstaessay.english@gmail.com ಗೆ ಕಳುಹಿಸಿಕೊಡಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ನ.12 ರಂದು ಅಕಾಡೆಮಿಯಿಂದ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಥಳದಲ್ಲೇ ಪ್ರಬಂಧವನ್ನು ಬರೆಯಬೇಕಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಚಂದ್ರಶೇಖರಮೂರ್ತಿ ಎಸ್. ಮೊ.ಸಂ.9686449019/ 9686919019 ಮತ್ತು 080-29721550 ನ್ನು ಅಥವಾ ಅಕಾಡೆಮಿಯ ವೆಬ್‍ಸೈಟ್ www.kstacademy.in ನ್ನು ವೀಕ್ಷಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಎಂ.ರಮೇಶ್ ತಿಳಿಸಿದ್ದಾರೆ.