ಮಡಿಕೇರಿ ಅ.23 NEWS DESK : ಸಂಪಾಜೆ ಗ್ರಾಮಕ್ಕೆ ರಾಜ್ಯ ವನ್ಯ ಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಸಂಪಾಜೆ ಗ್ರಾ.ಪಂ ಸಭಾಭವನದಲ್ಲಿ ಗ್ರಾಮಸ್ಥರಿಂದ ವನ್ಯ ಜೀವಿಗಳ ಹಾವಳಿ, ನೆಟ್ ವರ್ಕ್, ಹಾಗೂ ವಿದ್ಯುತ್ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಕೆ ಅಹ ವಾಲು ಸ್ವೀಕಾರ ಮಾಡಿದರು. ಗ್ರಾಮಸ್ಥರಾದ ಸೂರಜ್ ಹೊಸೂರು, ಬಿ.ಎ ಗಣಪತಿ, ಗಿರೀಶ್ ಹೊಸೂರು ಮತ್ತಿತರರು ಮಾತನಾಡಿ, ಸಂಪಾಜೆ, ಪೊಾಜೆ, ಚೆಂಬು ಗ್ರಾಮಸ್ಥರು ಆನೆ, ಮಂಗ, ವನ್ಯ ಪ್ರಾಣಿಗಳ ಹಾವಳಿಯಿಂದ ಅನುಭವಿಸುತ್ತಿರುವ ಸಮಸ್ಯೆ ಹಾಗೂ ವಿದ್ಯುತ್, ನೆಟ್ವರ್ಕ್ ಹಾಗೂ ಇತರ ಮೂಲಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಈ ಸಂದರ್ಭ ಮಾತನಾಡಿದ ಸಂಕೇತ ಪೂವಯ್ಯ, ಈ ಎಲ್ಲಾ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಅರಿವು ಇದ್ದು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕರ ಅವಿರತ ಶ್ರಮ ಹಾಗೂ ಪ್ರಯತ್ನಗಳನ್ನು ಸಭೆಗೆ ವಿವರಿಸಿದರು. ಸಂಪಾಜೆ ಗ್ರಾ.ಪಂ ಅಧ್ಯಕ್ಷ, ಪಯಸ್ವಿನಿ ಸಹಕಾರ ಸಂಘದ ನಿರ್ದೇಶಕ ಗಣಪತಿ, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ, ಗ್ಯಾರಂಟಿ ಯೋಜನಾ ಅನುಷ್ಠಾನ ಸದಸ್ಯ ಪಿ.ಎಲ್.ಸುರೇಶ್, ಸಂಪಾಜೆ ವಲಯ ಅರಣ್ಯ ಅಧ್ಯಕ್ಷ ಕೆ.ಕೆ.ವಿಜಯ ಕುಮಾರ್ ಕನ್ಯಾನ, ಗ್ಯಾರಂಟಿ ಯೋಜನಾ ಅನುಷ್ಠಾನದ ಸದಸ್ಯ ಪರಮಲೆ ಗಣೇಶ್, ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ಗ್ಯಾರಂಟಿ ಯೋಜನಾ ಅನುಷ್ಠಾನ ಸದಸ್ಯ ಮನು, ಮಡಿಕೇರಿ ಅಕ್ರಮ ಸಕ್ರಮ ಸದಸ್ಯರಾದ ತುಳಸಿ ಗಾಂಧಿ ಪ್ರಸಾದ್, ಪ್ರಮುಖರಾದ ರವಿರಾಜ್ ಹೊಸೂರು, ರಿತಿನ್ ಡೆಮ್ಮಲೆ, ಮೊಯಿದ್ದೀನ್ ಕುಂಞಿ, ತಿರುಮಲ ಸೋನ, ಹನೀಫ್ ಕೊಯನಾಡು, ಚೆಂಬು ಗ್ರಾಂ.ಪಂ ಸದಸ್ಯ ಗಿರೀಶ್ ಹೊಸೂರು, ರಾಜೇಶ್ ಕುಡ್ಕುಳಿ, ಸುಧೀರ್ ಹೊದ್ದೆಟ್ಟಿ, ಅರಣ್ಯ ಇಲಾಖೆ ಸಿಬ್ಬಂದಿ ವರ್ಗ, ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಂಪಾಜೆ, ಚೆಂಬು, ಪೆರಾಜೆ ಗ್ರಾಮಸ್ಥರು ಇದ್ದರು.