ಮಡಿಕೇರಿ ನ.16 NEWS DESK : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕಡಗದಾಳು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು ಕೃಷ್ಣ, ರಾಧೆ, ಆಂಜನೇಯ, ಪೆÇಲೀಸ್, ಸೈನಿಕ, ಭಾರತಾಂಬೆ, ಮಹಾತ್ಮ ಗಾಂಧೀಜಿ, ನೆಹರು, ಕಿತ್ತೂರು ರಾಣಿ ಚೆನ್ನಮ್ಮ, ಟೊಮೊಟೊ, ಸ್ಟ್ರಾಬೆರಿ, ಸೇಬು, ವಿವೇಕಾನಂದ, ರೈತ, ಪೂಜಾರಿ, ಏಂಜಲ್, ಛದ್ಮ ವೇಷ ರೂಪಧಾರಿಗಳಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಕೊಟ್ಟರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶುಭ ಮಾತನಾಡಿ ಮಕ್ಕಳ ವೇಷಭೂಷಣಗಳು ಸಂಸ್ಕೃತಿ, ಇತಿಹಾಸ, ಪುರಾಣ ನೆನಪಿಸುತ್ತದೆ. ಇದರಿಂದ ಮಕ್ಕಳ ಮನಸ್ಸಿನಲ್ಲಿ ಹಿರಿಯರ ತತ್ವ, ಆದರ್ಶಗಳು, ಉಳಿದು ಮುಂದಿನ ಪ್ರಜೆಗಳಾದ ಮಕ್ಕಳು ಉತ್ತಮ ಪ್ರಜೆಗಳಾಗಬಲ್ಲರು. ಎಲ್ಲ ಮಕ್ಕಳು ವಿಶ್ವಮಾನವರಾಗಿರುತ್ತಾರೆ, ಆದರೆ ಆ ಮಕ್ಕಳಿಗೆ ಧೈರ್ಯ ತುಂಬಿ ಸರಿಯಾದ ಮಾರ್ಗದರ್ಶನ ನೀಡಬೇಕಾಗುತ್ತದೆ ಎಂದರು. ಚಿಕ್ಕಂದಿನಿಂದ ತೇನ್‍ಸಿಂಗ್ ಕಂಡ ಕನಸನ್ನು ಜೀವನದಲ್ಲಿ ಸಾಧಿಸಿದ್ದನ್ನು ಉದಾರಣೆ ನೀಡಿದರು. ಮಕ್ಕಳ ಗುರಿ ಸಾಧನೆಗೆ ಸರಿಯಾದ ಮಾರ್ಗದರ್ಶಕರಾಗಿ ಪೆÇೀಷಕರು ಶಿಕ್ಷಕರು ದಾರಿದೀಪವಾಗಬೇಕೆಂದು ತಿಳಿಸಿದರು. ಮೇಲ್ವಿಚಾರಕಿ ಪ್ರಭಾರ ಸಾಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮೇಪಾದಂಡ ಸವಿತಾ ಕೀರ್ತನ್ ರವರು ಮಕ್ಕಳ ದಿನಾಚರಣೆ ಮಕ್ಕಳ ಹಕ್ಕುಗಳು, ಮಕ್ಕಳ ಸುರಕ್ಷಿತ ಆರೈಕೆ, ಮಕ್ಕಳ ಶಿಕ್ಷಣಕ್ಕೆ ಪೂರಕ ವಾಗುವಂತೆ ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕು ಎಂದು ತಿಳಿಸಿದರು. ವಿನೂತನವಾಗಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆ ಅನಿಲ, ಸಹಾಯಕಿ ಹೇಮಲತಾ ಅವರು ಮಕ್ಕಳ ಹೆಸರಿನಲ್ಲಿ ತರಕಾರಿ ಪಾಟ್‍ಗಳು, ಮಾಡುವುದರ ಮೂಲಕ ಮಕ್ಕಳಲ್ಲಿ ರಾಸಾಯನಿಕ ಮುಕ್ತ ಆಹಾರ ಸೇವನೆಯ ಬಗ್ಗೆ ಅರಿವು ಮೂಡಿಸಿದರು. ಅಮೃತಸ್ಥಾನ ಎಸ್ಟೇಟ್ ಮಾಲೀಕರಾದ ಗಂಗಾ ಎಲ್ಲಾ ಛದ್ಮವೇಶಧಾರಿಗಳಿಗೆ ಬಹುಮಾನವನ್ನು ನೀಡಿದರು. ಸಮುದಾಯ ಆರೋಗ್ಯ ಅಧಿಕಾರಿ ಕಲ್ಮೇಶ್ ಅವರು ಎಲ್ಲಾ ಮಹಿಳೆಯರಿಗೆ ಮತ್ತು ಮರಗೋಡು ವೃತ್ತದ ಸಹಾಯಕಿಯರಿಗೆ ಆರೋಗ್ಯ ತಪಾಸಣೆ ಬಿಪಿ, ಶುಗರ್, ಪರಿಶೀಲನೆ ನೆರವೇರಿತು. ಪ್ರತಿಮ ಬಾಲ ವಿಕಾಸ ಸಮಿತಿ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ರವರು, ಶಮ್ಮಿ ಪ್ರಭು ಇನ್ನರ್ ವ್ಯಾಲಿ ಸಂಸ್ಥೆಯ ಸದಸ್ಯರು, ಕುಂಜಪ್ಪ ರತಿ, ಪುಟ್ಲಪ್ಪ ಪೈಸಾರಿ ಅಂಗನವಾಡಿ ಕಾರ್ಯಕರ್ತೆ ಪುಷ್ಪ ಇದ್ದರು.