ಮಡಿಕೇರಿ NEWS DESK ಡಿ.23 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಆರಂಭಗೊಂಡಿತು. ಇಂದು ಗಣಪತಿ ಹೋಮ, ಬ್ರಹ್ಮರಾಕ್ಷಸನಿಗೆ ನೈವೇದ್ಯ ಸಮರ್ಪಣೆ, ದುರ್ಗಾಪೂಜೆ, ಹೊರೆಕಾಣಿಕೆ ಸಮರ್ಪಣೆ, ಮಹಾಪೂಜೆ ಮತ್ತು ಧ್ವಜಾರೋಹಣ ನೆರವೇರಿತು. ಡಿ.24 ಮತ್ತು 25 ರಂದು ನೈರ್ಮಲ್ಯ ಬಲಿ, ಧ್ವಜಸ್ತಂಭ ಪೂಜೆ, ಭೂತಬಲಿ ಹಾಗೂ ಮಹಾಪೂಜೆ ಜರುಗಲಿದೆ. ಡಿ.26 ರಂದು ತುಲಭಾರ ಸೇವೆ, ಧ್ವಜಸ್ತಂಭ ಪೂಜೆ, ನೃತ್ಯ ಬಲಿ, ವಸಂತ ಪೂಜೆ, ದೇವರ ಶಯನೋತ್ಸವ ಮತ್ತು ಮಹಾಪೂಜೆ ನಡೆಯಲಿದೆ. ಡಿ.27 ರಂದು ಕವಟ ಪೂಜೆ, ತೈಲಾಭ್ಯಂಜನ, ಪಂಚಭೂತ ಅಭಿಷೇಕ, ಧ್ವಜಸ್ತಂಭ ಪೂಜೆ, ದೇವರು ಜಳಕಕ್ಕೆ ಹೊರಡುವುದು, ದೇವಾಲಯದ ಆವರಣದಲ್ಲಿ ನೃತ್ಯ ಬಲಿ, ನಡೆ ಭಂಡಾರ, ಧ್ವಜಾರೋಹಣ ಮತ್ತು ಮಹಾಪೂಜೆ ಜರುಗಲಿದೆ.
ಜಾತ್ರಮಹೋತ್ಸವದ ಕೊನೆಯ ದಿನವಾದ ಡಿ.28 ರಂದು ನವಕ ಕಲಶ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ಹಾಗೂ ಮಂತ್ರಾಕ್ಷತೆ ವಿತರಣೆಯಾಗಲಿದೆ. ಜಾತ್ರಾ ಮಹೋತ್ಸವದ ಆರು ದಿನಗಳ ಕಾಲ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಇರುತ್ತದೆ. ಅನ್ನಸಂತರ್ಪಣೆ ಹಾಗೂ ಹೊರೆಕಾಣಿಕೆಗೆ ಸಹಕಾರ ನೀಡುವವರು 9449402305, 9480244642, 9880255064 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.












