ಮಡಿಕೇರಿ ಡಿ.5 NEWS DESK : ಕಾಫಿ ಕೃಷಿರಂಗದ ಮೇಲೆ ಪರಿಣಾಮ ಬೀರುವ ಸಫೇ೯ಸಿ ಕಾಯಿದೆ ಸಂಬಂಧಿತ ಲೋಕಸಭೆಯಲ್ಲಿ ಗಮನ ಸೆಳೆದು ಕಾಫಿ ಕೃಷಿಯು ಸಫೇ೯ಸಿ ಕಾಯಿದೆಯಡಿ ಬರುವುದಿಲ್ಲ ಎಂಬ ನಿರ್ಣಾಯಕ ಉತ್ತರಕ್ಕೆ ಕಾರಣರಾದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಮತ್ತು ಕನಾ೯ಟಕ ಬೆಳೆಗಾರರ ಒಕ್ಕೂಟ ಕೃತಜ್ಞತೆ ಸಲ್ಲಿಸಿದೆ. ಈಗಾಗಲೇ ತೀವ್ರ ನೈಸರ್ಗಿಕ ವಿಕೋಪಗಳು, ನಿರಂತರ ಬೆಳೆ ವೈಫಲ್ಯಗಳು ಮತ್ತು ಕಡಿಮೆ ಸರಕು ಬೆಲೆ ಸಂಕಷ್ಟ ಎದುರಿಸುತ್ತಿರುವ ಕಾಫಿ ಕೃಷಿಕರ ಮೇಲೆ ಸಫೇ೯ಸಿ ಕಾಯಿದೆಯು ಮತ್ತೊಂದು ಮಾನಸಿಕ, ಆಥಿ೯ಕ ಹೊಡೆತದಂತಿತ್ತು, ಕಾಫಿ ಕೖಷಿಕರು ಬ್ಯಾಂಕ್ ನಲ್ಲಿ ಮಾಡಿರುವ ಸಾಲದ ವಸೂಲಾತಿಗೆ ಸಫೇ೯ಸಿ ಕಾಯಿದೆ ಬಳಸಿಕೊಂಡು ಸಾಲಗಾರ ಕೖಷಿಕನ ಕಾಫಿ ತೋಟವನ್ನು ಬ್ಯಾಂಕ್ ಗಳು ಜಪ್ತಿ ಮಾಡುವ ಮೂಲಕ ಕೖಷಿಕರ ಆತಂಕಕ್ಕೆ ಕಾರಣವಾಗಿತ್ತು, ಕಾಯಿದೆಯನ್ನನ ಬ್ಯಾಂಕಿಂಗ್ ವಲಯವು ಜಾರಿಗೊಳಿಸುತ್ತಿದ್ದ ಹಿನ್ನಲೆಯಲ್ಲಿ ಅನೇಕ ಕಾಫಿ ಬೆಳೆಗಾರರು ತಮ್ಮ ಅಮೂಲ್ಯ ಕಾಫಿ ತೋಟಗಳನ್ನು ಕಳೆದುಕೊಳ್ಳುವಂಥ ಪರಿಸ್ಥಿತಿ ಎದುರಾಗಿತ್ತು, ಸಂಸತ್ತಿನ ಅಧಿವೇಶನದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನ ಸೆಳೆಯುವ ಪ್ರಶ್ನೆಯಾಗಿದ್ದ ಕಾಫಿ ಕೃಷಿಯು ಸಫೇ೯ಸಿ ಕಾಯಿದೆಯಡಿ ಬರುತ್ತದೆಯೇ ಎಂಬ ಗಮನ ಸೆಳೆಯುವ ಪ್ರಶ್ನೆಗೆ ಕಾಫಿ ಕೖಷಿ ಸಫೇ೯ಸಿ ಕಾಯಿದೆಯಡಿ ಬರುವುದಿಲ್ಲ ಎಂಬ ಸ್ಪಷ್ಟ ಉತ್ತರ ನೀಡಿದ ಭಾರತ ಸರ್ಕಾರದ ವಾಣಿಜ್ಯ ಸಚಿವರಾದ ನಿಮ೯ಲಾ ಸೀತಾರಾಮ್ ಅವರಿಗೆ ಕಾಫಿ ಕೖಷಿ ಸಂಘಟನೆಗಳ ವತಿಯಿಂದ ಧನ್ಯವಾದ ಸಲ್ಲಿಸುತ್ತೇವೆ ಎಂದೂ ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷರಾದ ಎ ನಂದಾ ಬೆಳ್ಯಪ್ಪ ಮತ್ತು ಕನಾ೯ಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಕೆ.ಕೆ.ವಿಶ್ವನಾಥ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸ್ಪಷ್ಟ ಉತ್ತರದ ಮೂಲಕ ಕಾಫಿ ಬೆಳೆಗಾರರು ಸಫೇ೯ಸಿ ಕಾಯಿದೆಯಿಂದ ಎದುರಿಸುತ್ತಿದ್ದ ಮಾನಸಿಕ ಮತ್ತು ಆಥಿ೯ಕ ಒತ್ತಡದ ಸಮಸ್ಯೆಗಳಿಂದ ದೂರವಾಗಲಿದ್ದಾರೆ, ಈ ಉತ್ತರವು ಕಾಫಿ ಕೖಷಿಕರಿಗೆ ಕಾನೂನಿನ ರಕ್ಷಣೆ ನೀಡಿದಂತಾಗಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ. ತಡವಾಗಿಯಾದರೂ ಈ ಸ್ಪಷ್ಟೀಕರಣವು ಕೃಷಿಕ ಸಮುದಾಯದ ಹಿತಾಸಕ್ತಿಗೆ ನಿರ್ಣಾಯಕವಾಗಿದೆ. ಕಾಫಿ ಕೃಷಿಕರಿಗೆ ಮುಂದಿನ ದಿನಗಳಲ್ಲಿ ಸಫೇ೯ಸಿ ಕಾಯಿದೆಯನ್ನು ಬಳಸಿಕೊಂಡು ಅನಗತ್ಯವಾಗಿ ನೋಟೀಸ್ ಜಾರಿಗೊಳಿಸುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಬೆಳೆಗಾರ ಸಂಘಟನೆಗಳು ಎಚ್ಚರಿಸಿದೆ, ಬ್ಯಾಂಕಿಂಗ್ ವಲಯ ಸಂಸತ್ತಿನಲ್ಲಿ ನೀಡಲಾದ ಸ್ಪಷ್ಟ ಮಾಹಿತಿಯನ್ನು ಗಮನಿಸಿ ಇನ್ನಾದರೂ ಕಾಫಿ ಬೆಳೆಗಾರರಿಗೆ ಸಫೇ೯ಸಿ ಕಾಯಿದೆಯನುಸಾರ ನೋಟೀಸ್ ನೀಡುವುದನ್ನು ನಿಲ್ಲಿಸಲೇಬೇಕೆಂದೂ ಹೇಳಿಕೆಯಲ್ಲಿ ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಮತ್ತು ಕನಾ೯ಟಕ ಬೆಳೆಗಾರರ ಒಕ್ಕೂಟ ಜಂಟಿ ಹೇಳಿಕೆ ಮೂಲಕ ಆಗ್ರಹಿಸಿದೆ.