ನಾಪೋಕ್ಲು ಡಿ.16 NEWS DESK : ನಾಪೋಕ್ಲು ಕೊಡವ ಸಮಾಜದಲ್ಲಿ ಪುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಆಚರಿಸಲಾಯಿತು. ಮೊದಲು ಕೊಡವ ಸಮಾಜದಲ್ಲಿ ನೆರೆಕಟ್ಟಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಸಮಾಜದ ಪ್ರಮುಖರು, ಹಿರಿಯರು ಹಾಗೂ ಪದಾಧಿಕಾರಿಗಳು ಬೊಟ್ಟೋಳಂಡ ರಾಜ ಬೋಜಪ್ಪ ಗದ್ದೆಗೆ ತೆರಳಿ ಶಸ್ತ್ರೋತ್ರವಾಗಿ ಭತ್ತದ ಕದಿರನ್ನು ತೆಗೆದು ಪುತ್ತರಿ ಕುತ್ತಿಯಲ್ಲಿ ಇರಿಸಿ ಸುಡುಮದ್ದುಗಳು ಹಾಗೂ ಪೊಲಿ ಪೊಲಿಯೇ ಬಾ ಉದ್ಘೋಷಗಳೊಂದಿಗೆ ಸಮಾಜಕ್ಕೆ ಹಿಂತಿರುಗಿದರು. ನಂತರ ಸಾಂಪ್ರದಾಯದಂತೆ ಆಚರಣೆ ಮಾಡಿ ಆಗಮಿಸಿದವರಿಗೆ ಕದಿರಲು ವಿತರಿಸಿದರು. ಈ ಸಂದರ್ಭ ಬೊಟ್ಟೋಳಂಡ ಗಣೇಶ, ಕನ್ನಂಬೀರ ಸುದೀಪ್ ತಿಮ್ಮಯ್ಯ, ಮಣವಟ್ಟಿರ ಡಿಕ್ಕ, ಕರ್ತಮಾಡ ವಿಜು, ಬೊಟ್ಟೋಳಂಡ ಚೇತನ್ ಸೇರಿದಂತೆ ಇತರರು ಇದ್ದರು.
ವರದಿ : ದುಗ್ಗಳ ಸದಾನಂದ.