ಮಡಿಕೇರಿ ಡಿ.17 NEWS DESK : ಕುಶಾಲನಗರದ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಕೂಡಿಗೆ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ರೈತರಿಗೆ ವಿವಿಧ ಯೋಜನೆಗೆ ಸಂಬಂಧಿಸಿದಂತೆ ಮತ್ತು ಕೃಷಿ, ಹೈನುಗಾರಿಕೆಗೆ ಸಂಬಂಧಿಸಿದ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಬ್ಯಾಂಕ್ ನ ವಿಭಾಗಿಯ ಮೇನೆಜರ್ ಸಿಜೀತ್ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸಂಧ್ಯಾಶಿಬಿರ, ಕಿಸಾನ್ ಯೋಜನೆ, ಮತ್ತು ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಕುರಿ ಸಾಕಾಣಿಕೆಗೆ ಸಾಲ ಸೌಲಭ್ಯಗಳನ್ನು ಒದಗಿಸುವ ಯೋಜನೆಯ ಹಂತಗಳ ಬಗ್ಗೆ, ರೈತರ ಜಮೀನಿನ ಅಧಾರದ ಮೇಲೆ ಸರಕಾರದ ನಿಯಮಾನುಸಾರ ವಿವಿಧ ಬಗೆಯ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು. ರಾಮೇಶ್ವರ ಕೂಡುಮಂಗಳೂರು ಸಹಕಾರ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಕೆ.ಪಿ.ರಾಜು, ಆರ್. ಕೆ.ನಾಗೇಂದ್ರ ಬಾಬು, ಜಯಶ್ರೀ, ಕುಮಾರ್, ಎಸ್. ಎಸ್ ಕೃಷ್ಣ, ಕೃಷ್ಣಗೌಡ, ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಂ. ಪಿ. ಮೀನಾ, ಕುಶಾಲನಗರ ಎಸ್. ಬಿ.ಐ. ಬ್ಯಾಂಕ್ ನ ಮೇನೆಜರ್ ಕೆ. ಪವಿತ್ರ, ಕೃಷಿ ವಿಭಾಗದ ಅಧಿಕಾರಿ ಮಧು, ಮೋಹನ್ ರಾಜ್, ಮುತ್ತಣ್ಣ, ಲೋಹಿತ್,ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ಸಂಘ ವ್ಯಾಪ್ತಿಯ ವಿವಿಧ ಗ್ರಾಮಗಳ ನೂರಾರು ರೈತರು ಮಾಹಿತಿ ಭಾಗವಹಿಸಿದರು.