ಮಡಿಕೇರಿ ಡಿ.19 NEWS DESK : ಆಲ್ ಇಂಡಿಯಾ ಸೂಪರ್ ಫೈವ್ಸ್ “ಕೊಡಗು ವರ್ಲ್ಡ್ ಕಪ್”ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಗೋಣಿಕೊಪ್ಪಲಿನ ಸರ್ವದೈವತಾ ಶಾಲೆಯ ಆವರಣದಲ್ಲಿ ನಡೆಯಿತು. ಮೇ ತಿಂಗಳ ಒಂದರಿಂದ ನಾಲ್ಕರವೆಗೆ ಜಿಲ್ಲೆಯ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಗಳಲ್ಲಿ ಒಂದಾದ ಆಲ್ ಸ್ಟಾರ್ ಎಫ್.ಸಿ ಗೋಣಿಕೊಪ್ಪ ತಂಡವು ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಫುಟ್ಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದೆ. ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಶಿಕ್ಷಕಿ ಶೀಲಾ ಬೋಪಣ್ಣ, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ವಿಜೇತ ತಂಡಕ್ಕೆ ಎರಡು ಲಕ್ಷದ ನಗದು ಬಹುಮಾನ ನೀಡುವ ಫುಟ್ಬಾಲ್ ಕ್ರೀಡಾಕೂಟವನ್ನು ಆಲ್ ಸ್ಟಾರ್ ಎಫ್.ಸಿ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ. ವಲ್ಡ್ ಕಪ್ ಫುಟ್ಬಾಲ್ ಅಚ್ಚುಕಟ್ಟಾಗಿ ನಡೆಯಲಿ ಎಂದು ಅವರು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲಿನ ಎಒನ್ ಶರತ್, ಬಿಎನ್ಎಸ್ ಟ್ರೇಡರ್ಸ್ ಸುಧಾಕರ್ ರೈ, ಪಿಮ್ ಸ್ಪೋರ್ಟ್ಸ್ ಮಾಲೀಕ ಸಲೀಮ್, ಹಮೀದ್, ಮುಕ್ತಾರ್, ಅಕ್ಷಯ್, ಸುಮನ್, ಲಕ್ಷಣ್, ಆಲ್ ಸ್ಟಾರ್ ಫುಟ್ಬಾಲ್ ಪದಾಧಿಕಾರಿಗಳಾದ ರನೀಸ್,ಶಾನಿಫ್,ಸವಾದ್,ರಾಫಿ,ಅಮೀನ್,ಬೋಪಣ್ಣ, ವಿನ್ಸಿ ಹಾಗೂ ವಿಲ್ಲ್ಯಮ್ ಇದ್ದರು. ದ್ವಿತೀಯ ಸ್ಥಾನವನ್ನು ಪಡೆಯುವ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ಒಂದು ಲಕ್ಷ ರೂ ನಗದು ಬಹುಮಾನ ನೀಡಲಾಗುತ್ತಿದೆ. ಭಾರತ ದೇಶದ ವಿವಿಧ ರಾಜ್ಯಗಳ ಪ್ರತಿಷ್ಠಿತ ತಂಡಗಳು ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, 7500 ರೂ ತಂಡಗಳ ನೋಂದಣಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8075082004,7624945754 ಹಾಗೂ 9741619622 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.