




ಚೆಟ್ಟಳ್ಳಿ ಡಿ.20 NEWS DESK : ಅರುಣಾಚಲ ಪ್ರದೇಶದ ಲೋವರ್ ದಿಬಾಂಗ್ ಕಣಿವೆಯ ಡಂಬುಕ್‌ನಲ್ಲಿ ನಡೆದ ಭಾರತದ ಅಗ್ರಗಣ್ಯ ಆಫ್-ರೋಡಿಂಗ್ ಈವೆಂಟ್‌ಗಳಲ್ಲಿ ಒಂದಾದ ಜೆಕೆ ಟೈರ್ ಆರೆಂಜ್ 4×4 ಫ್ಯೂರಿ-2024ನಲ್ಲಿ ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಹಾಗೂ ಗೋಣಿಕೊಪ್ಪಲಿನ ಎಸ್.ಎಸ್.ಆಟೋ ಗ್ಯಾರೇಜಿನ ಮಾಲೀಕ ಸನೋಜ್ ಸಹದೇವನ್ ಜೋಡಿ ಪ್ರಥಮ ಸ್ಥಾನ ಪಡೆದಿದ್ದಾರೆ. ಜೆಕೆ ಟೈರ್ ಓರೇಂಜ್ 4×4 ಫೂರಿ ರೇಸ್‌ನ 8 ನೇ ಆವೃತ್ತಿಯ ಪ್ರೋಮೋಡಿ ಫೈಡ್ ಕ್ಯಾಟಗರಿಯಲ್ಲಿ ಮೊದಲ ದಿನ ಎರಡು ಹಂತಗಳಿದ್ದು, ಎರಡನೇ ದಿನ ಮೂವತ್ತೆರಡು ಹಂತಗಳನ್ನು ಎದುರಿಸುವ ಮೂಲಕ ಒಟ್ಟು 84 ಕಿ.ಮೀ ಕ್ರಮಿಸುವ ಮೂಲಕ ಮೊದಲ ಸ್ಥಾನ ಪಡೆಯುವ ಮೂಲಕ 3 ಲಕ್ಷ ನಗದು ಹಾಗೂ ಆಕರ್ಶಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಉತ್ತರಭಾರತದಿಂದ ಹಲವು ನುರಿತ ರ‍್ಯಾಲಿ ಪಟುಗಳು ಸಾಹಸಮಯ ರ‍್ಯಾಲಿಕ್ರೀಡೆಯಲ್ಲಿ ಭಾಗವಿಸಿದರೆ ದಕ್ಷಿಣ ಭಾರತದಿಂದ ಕೊಡಗಿನ V5 ಆಫ್-ರೋಡರ್ಸ್ ತಂಡದ ಉದ್ದಪಂಡ ಚೇತನ ಚಂಗಪ್ಪ ಹಾಗೂ ಕೋ-ಡ್ರೈವರ್ ಗೋಣಿಕೊಪ್ಪಲಿನ ಸನೋಜ್ ಸಾಹಾದೇವನ್ ಜೋಡಿ ದಕ್ಷಿಣ ಭಾರತದಿಂದ ಸ್ಪರ್ಧಿಸಿದ ಏಕೈಕ ಜೋಡಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.
ವರದಿ : ಪುತ್ತರಿರ ಕರುಣ್ ಕಾಳಯ್ಯ