ಸುಂಟಿಕೊಪ್ಪ ಡಿ.23 NEWS DESK : ಪೋಷಕರು ತಮ್ಮ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕೆಂದು ಸೋಮವಾರಪೇಟೆ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕರೆ ನೀಡಿದರು. ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಸಂಯಕ್ತ ಕಾಲೇಜಿನಲ್ಲಿ ನಡೆದ ಕ್ರೀಡಾ ದಿನಚಾರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸೋಮವಾರಪೇಟೆ, ಕುಶಾಲನಗರ ತಾಲ್ಲೂಕುಗಳಲ್ಲಿ ಮಡಿಕೇರಿ ಜನಪ್ರಿಯ ಶಾಸಕ ಡಾ.ಮಂತರ್‍ಗೌಡ ಅವರ ನಿರ್ದೇಶನ ಮತ್ತು ಉತ್ತೇಜನದ ಮೇರೆಗೆ ಆರು ಶ್ರೇಷ್ಠಗುಣ ಮಟ್ಟದ ವಾಲಿಬಾಲ್ ಮೈದಾನಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ಧರ್ಮಗುರುಗಳಾದ ರೆ.ಪಾ.ಅವಿನಾಶ್ ಮಾತನಾಡಿ, ಸಂತೋಷವನ್ನು ಅಂಗಡಿಯಲ್ಲಿ ಖರೀದಿಸಲು ಸಾಧ್ಯವಿಲ್ಲ. ನಮ್ಮೊಳಗೆ ಉಳಿಸಿಕೊಳ್ಳಬೇಕಾದರೆ ನಾವು ದೈಹಿಕವಾಗಿ ಸಧೃಢರಾಗಿರಬೇಕು. ದೈಹಿಕವಾಗಿಸದೃಢರಾಗಿಬೇಕಾದರೆ ಕ್ರೀಡೆ ಅತ್ಯವಶ್ಯಕ ಎಂದರು. ಸಂತ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕ ರೇ.ಪಾ.ವಿಜಯಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೋಷಕರು ತಮ್ಮಿಂದ ಸಾಧಿಸಲಾಗದನ್ನು ಮಕ್ಕಳ ಹೇರÀಬೇಡಿ, ಮಕ್ಕಳು ಅವರ ಇಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಿ ಎಂದು ಕರೆ ನೀಡಿದರು. ಜಗತ್ತಿನಲ್ಲಿ ಅತೀ ಹೆಚ್ಚು ಕನಸ್ಸುಗಳು ಮತ್ತು ಜ್ಞಾನ ಹುದುಗಿರುವ ಮನುಷ್ಯನ ಸಮಾಧಿಯಾಗಿದ್ದು, ಇದನ್ನು ಮನಗಾಣಬೇಕೆಂದು ಕಿವಿಮಾತು ಹೇಳಿದರು. ಮಕ್ಕಳ ಮೇಲೆ ತಮ್ಮ ಕನಸ್ಸುಗಳನ್ನು ಏರುವ ಮೂಲಕ ಪೋಷಕರು ತಮ್ಮ ಸ್ವಾರ್ಥ ಮತ್ತು ತಪ್ಪನ್ನು ಪ್ರದರ್ಶಿಸುತ್ತಿದ್ದಾರೆಂದು ಫಾ.ವಿಜಯಕುಮಾರ್ ವಿಷಾದಿಸಿದರು. ಕಾರ್ಯಕ್ರಮದಲ್ಲಿ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಜೋವಿಟಾ ವಾಸ್, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾದ್ಯಾಯ ಸೇಲ್ವರಾಜ್ ಹಾಗೂ ಸಹ ಶಿಕ್ಷಕರು ಇದ್ದರು. ಕ್ರೀಡಾ ಸಮಾರಂಭದ ಮೊದಲಿಗೆ ಧ್ವಜಾರೋಹಣ ನಡೆಸಿ ಪಾರಿವಳವನ್ನು ಹಾರಿ ಬಿಡುವ ಮೂಲಕ ಸಮಾರಂಭಕ್ಕೆ ಅತಿಥಿಗಳು ಚಾಲನೆ ನೀಡಿದರು. ಶಾಲಾ ಮಕ್ಕಳಿಂದ ನಡೆಸಿದ ವ್ಯಾಯಾಮ, ನೃತ್ಯ ಹಾಗೂ ಸಾಹಸ ಪ್ರದರ್ಶನಗಳು ನೆರೆದಿದ್ದ ಪೋಷಕರ ಹಾಗೂ ಸಾರ್ವಜನಿಕರು ಮನಸೂರೆಗೊಂಡಿತು.