ಮಡಿಕೇರಿ ಡಿ.27 NEWS DESK : ಪ್ರಸಕ್ತ(2024-25) ಸಾಲಿಗೆ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ (ಪಿಯುಸಿ ಮತ್ತು ಪಿಯುಸಿ ಸಮಾನಾಂತರ ಕೋರ್ಸಿನ, ಸಾಮಾನ್ಯ ಪದವಿ ಮಟ್ಟದ ಕೋರ್ಸು, ವೃತ್ತಿಪರ ಕೋರ್ಸು ಮತ್ತು ಸ್ನಾತಕೋತ್ತರ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಾತಿಗಾಗಿ ರಾಜ್ಯ ವಿದ್ಯಾರ್ಥಿ ನಿಲಯ ತಂತ್ರಾಂಶದ ಆನ್‍ಲೈನ್” ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 2024-25 ನೇ ಸಾಲಿಗೆ ಕೊಡಗು ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯ ಮಡಿಕೇರಿ ಹಾಗೂ ಕುಶಾಲನಗರದ ವಿದ್ಯಾರ್ಥಿ ನಿಲಯಗಳ (ಪಿಯುಸಿ ಮತ್ತು ಪಿಯುಸಿ ಸಮಾನಾಂತರ ಕೋರ್ಸಿನ, ಸಾಮಾನ್ಯ ಪದವಿ ಮಟ್ಟದ ಕೋರ್ಸು, ವೃತ್ತಿಪರ ಕೋರ್ಸು ಮತ್ತು ಸ್ನಾತಕೋತ್ತರ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಾತಿಗಾಗಿ ರಾಜ್ಯ ವಿದ್ಯಾರ್ಥಿ ನಿಲಯ ತಂತ್ರಾಂಶದ https://shp.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜನವರಿ, 10 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಕಛೇರಿ ದೂರವಾಣಿ ಸಂಖ್ಯೆ: 08272-225528/220214, ನಿಲಯಪಾಲಕರು 9742116601, 9945960004 ನ್ನು ಸಂಪರ್ಕಿಸಬಹುದು. ಅರ್ಹ ವಿದ್ಯಾರ್ಥಿಗಳು ಕೂಡಲೇ ಇದರ ಸದುಪಯೋಗಪಡಿಸಿಕೊಳ್ಳುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ಕೃಷ್ಣಮೂರ್ತಿ ತಿಳಿಸಿದ್ದಾರೆ.