ಕುಶಾಲನಗರ NEWS DESK ಡಿ.27 : ದ್ವಿಚಕ್ರ ವಾಹನ ಮತ್ತು ಟಿಟಿ ನಡುವೆ ಡಿಕ್ಕಿ ಸಂಭವಿಸಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಶಾಲನಗರ- ಹಾರಂಗಿ ರಸ್ತೆಯಲ್ಲಿ ನಡೆದಿದೆ. ಕುಶಾಲನಗರ ಪುರಸಭೆ ವ್ಯಾಪ್ತಿಯ ಶ್ರೀರಾಮ್ ಬಡಾವಣೆಯ ಜೈರಾಮ್ ಹಾಗೂ ಸವಿತ ದಂಪತಿಯ ಕಿರಿಯ ಪುತ್ರ ಕವಿರತ್ನ(20) ಮೃತ ಯುವಕ. ಕುಶಾಲನಗರದ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಮತ್ತು ಎದುರಿನಿಂದ ಬರುತ್ತಿದ್ದ ಟಿಟಿ ನಡುವೆ ಅಪಘಾತ ಸಂಭವಿಸಿದೆ. ಮೃತ ಕವಿರತ್ನ ಸೇರಿದಂತೆ ಸ್ಕೂಟರ್ ನಲ್ಲಿ ಮೂವರು ಯುವಕರಿದ್ದರು ಎಂದು ಹೇಳಲಾಗಿದೆ. ಇಬ್ಬರು ಗಾಯಾಳುಗಳನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೃತ ಕವಿರತ್ನ ಇಬ್ಬರು ಸಹೋದರಿಯರು ಹಾಗೂ ಪೋಷಕರನ್ನು ಅಗಲಿದ್ದಾನೆ. ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.