ನಾಪೋಕ್ಲು ಜ.6 NEWS DESK : ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣ ಘಟಕದ ವತಿಯಿಂದ ನಾಪೋಕ್ಲು ಹಳೆ ತಾಲ್ಲೂಕು ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಅಂಗನವಾಡಿ ಕೇಂದ್ರದ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭ ಸೇವೆಯಲ್ಲಿ ಘಟಕದ ಪ್ರಮುಖರಾದ ಬಾಳೆಯಡ ದಿವ್ಯ, ಶಂಕರ್, ಶರವಣ, ರವಿ, ಉಮಾಲಕ್ಷ್ಮಿ, ಚಂದ್ರಕಲಾ, ಶ್ಯಾಮಲಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಸಹಾಯಕಿ ಸರೋಜ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.