ವಿರಾಜಪೇಟೆ ಜ.7 NEWS DESK : ಕರ್ನಾಟಕ ಸರಕಾರದ ಗಂಗೂಭಾಯಿ ಹಾನಗಲ್ ಯೂನಿವರ್ಸಿಟಿ ವತಿಯಿಂದ ಅಕ್ಟೋಬರ್ ತಿಂಗಳಿನಲ್ಲಿ ನಡೆಸಿದ ಭರತನಾಟ್ಯ ಪರೀಕ್ಷೆಯಲ್ಲಿ ನಾಟ್ಯಂಜಲಿ ನೃತ್ಯ ಸಂಸ್ಥೆಗೆ ಶೇ.100 ರಷ್ಟು ಫಲಿತಾಂಶ ದೊರೆತಿದೆ. ಪರೀಕ್ಷೆಗೆ ಹಾಜರಾಗಿದ್ದ ಸಂಸ್ಥೆಯ ವಿದ್ಯಾರ್ಥಿಗಳಾದ ಮನ್ವಿತಾ, ಜಾನ್ವಿ ಶೆಟ್ಟಿ, ಅಶ್ಮಯ ಸಚಿನ್ ಹಾಗೂ ಪಿಯಾ ಪೊನ್ನಮ್ಮ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಹಲವಾರು ವರ್ಷಗಳಿಂದ ಶೇ.100 ರಷ್ಟು ಫಲಿತಾಂಶವನ್ನು ಈ ಸಂಸ್ಥೆ ಪಡೆದುಕೊಂಡು ಬಂದಿರುವುದು ಸಂಸ್ಥೆಯ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಗುರು ಹೇಮಾವತಿ ಕಾಂತ್‍ರಾಜ್ ಹಾಗೂ ಗುರು ಕಾವ್ಯಶ್ರೀ ಕಾಂತ್‍ರಾಜ್ ತಿಳಿಸಿದ್ದಾರೆ.