ಮೂರ್ನಾಡು ಜ.7 NEWS DESK : ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ನವೀಕೃತಗೊಂಡ ಕಟ್ಟಡದ ಮೇಲ್ಛಾವಣಿಯ ಉದ್ಘಾಟನಾ ಸಮಾರಂಭ ಮತ್ತು ಕಾಲೇಜಿನ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು. ಮೈಸೂರಿನ ನಾರಾಯಣ ಆಸ್ಪತ್ರೆಯ ರೀಜನಲ್ ಹೆಚ್.ಆರ್.ಮಾಳೇಟಿರ ನಿರ್ಮಲಾ ಮಾದಪ್ಪ ಕಾಲೇಜಿನ ನವೀಕೃತಗೊಂಡ ಕಟ್ಟಡದ ಮೇಲ್ಛಾವಣಿಯನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಾಧನೆ ಗೈಲು ಸಾಧ್ಯ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ವಿದ್ಯಾಸಂಸ್ಥೆಯ ಸದುಪಯೋಗಪಡೆದುಕೊಂಡು ಭವಿಷ್ಯದಲ್ಲಿ ಉತ್ತಮ ಬದುಕುರೂಪಿಸಿಕೊಳ್ಳಬೇಕು ಎಂದರು. ನಾನು ಈ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದು, ನಾರಾಯಣ ಆಸ್ಪತ್ರೆಯ ಮೂಲಕ ಕಾಲೇಜಿನ ಕಟ್ಟಡದ ಮೇಲ್ಛಾವಣಿಯನ್ನು ನವೀಕರಣಗೊಳಿಸಲು ಒಂದು ಸದಾವಕಾಶ ಸಿಕ್ಕಿದೆ ಎಂದರು. ವಿದ್ಯೆಕಲಿಸಿದ ಸಂಸ್ಥೆಯ ಬೆಳವಣಿಗೆಗೆ ಕೈಜೋಡಿಸಲು ತುಂಬಾಸಂತೋಷವಾಗುತ್ತದೆ. ಜಿಲ್ಲೆಯಲ್ಲಿ ಈ ವಿದ್ಯಾಸಂಸ್ಥೆಯು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದು ಹೇಳಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಸಿ.ಜಗತ್ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎನ್.ಪಿ.ಮಾದಪ್ಪ, ಕಾರ್ಯದರ್ಶಿ ಪಿ.ಎಂ.ಅಪ್ಪಣ್ಣ, ಖಜಾಂಚಿ ವಿ.ಎ.ಯತೀಶ್, ನಿರ್ದೇಶಕರಾದ ಇ.ಯು. ಸೋಮಣ್ಣ, ಪುದಿಯೊಕ್ಕಡ. ಎ.ಹರೀಶ್, ಪಿ.ಎ.ಹರೀಶ್, ಎಂ.ಕೆ.ಚಂಗಪ್ಪ, ಕೆ.ಜಿ.ರಾಮಮೂರ್ತಿ, ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ ಮತ್ತು ರೈಡ್ಫಾರ್ಕಾಸ್ûನ ಎನ್‍ಜಿಒ ಸದಸ್ಯರು ಹಾಜರಿದ್ದರು. ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲೆ ಬಿ.ಎಂ.ಸರಸ್ವತಿ, ಕಟ್ಟಡ ನವೀಕರಣಕ್ಕೆ ಸಹಾಯ ನೀಡಿದ ನಾರಾಯಣ ಹಾಸ್ಪಿಟಲ್‍ನ ಯುನಿಟಿಹೆಡ್ ಮಾಳೇಟಿರ ನಿರ್ಮಲಾ ಮಾದಪ್ಪ ಅವರಗನ್ನು ಸಂಸ್ಥೆಯಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ವರದಿ :ಟಿ.ಸಿ. ನಾಗರಾಜ್, ಮೂರ್ನಾಡು.