ಮಡಿಕೇರಿ ಜ.13 NEWS DESK : ಪ್ರವಾಸೋದ್ಯಮ, ಸೇನಾ ನೇಮಕಾತಿ, ಕೃಷಿ ಸಂಬಂಧಿತ ಉದ್ಯೋಗಗಳೂ ಸೇರಿದಂತೆ ವಿದ್ಯಾವಂತರಿಗೆ ಸಾಕಷ್ಟು ಉದ್ಯೋಗವಕಾಶಗಳು ಸಮಾಜದಲ್ಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಸಿ.ಜಿ.ಕುಶಾಲಪ್ಪ ಕರೆ ನೀಡಿದ್ದಾರೆ. ಮಾದಾಪುರ ಬಳಿಯ ಗರಗಂದೂರಿನ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಷನ್ ಸೊಸೈಟಿಯ ವಜ್ರಮಹೋತ್ಸವ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಸಿ. ಜಿ. ಕುಶಾಲಪ್ಪ, ವಿದ್ಯಾವಂತರಿಗೆ ಕೊಡಗಿನಲ್ಲಿಯೇ ಸಾಕಷ್ಟು ಉದ್ಯೋಗ ದೊರಕುತ್ತದೆ, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ವೖತ್ತಿಯ ಅವಕಾಶಗಳನ್ನು ಕೊಡಗಿನ ಯುವಪೀಳಿಗೆ ಸಮಥ೯ವಾಗಿ ಬಳಸಿಕೊಳ್ಳಬೇಕು, ಕೊಡಗಿನಲ್ಲಿನ ಪ್ರವಾಸೋದ್ಯಮ ಕ್ಷೇತ್ರದ ಉದ್ಯೋಗಗಳನ್ನು ಕೊಡಗಿನವರಿಗೆ ನೀಡುವಂತಾಗಬೇಕು, ಅಂತೆಯೇ ಭಾರತೀಯ ಸೇನೆಯಲ್ಲಿ ಅಗ್ನವೀರ್ ನಂಥ ನೇಮಕಾತಿಯ ಯೋಜನೆಯನ್ನೂ ಯುವೀಳಿಗೆ ಬಳಸಿಕೊಳ್ಳಬೇಕು. ಕೖಷಿ ರಂಗದಲ್ಲಿಯೂ ವಿಪುಲ ಅವಕಾಶಗಳಿದ್ದು, ಕೖಷಿ ವಿಷಯದಲ್ಲಿ ಸಿಇಟಿ ಬರೆದ ವಿದ್ಯಾಥಿ೯ಗಳಿಗೆ ಉದ್ಯೋಗ ಸುಲಭಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು. ಜೀವನದಲ್ಲಿ ಉದ್ದೇಶಿತ ಗುರಿಯತ್ತ ಸಾಗುವ ಕನಸಿದ್ದರೆ ಸಾಕು, ಇಂಥ ಕನಸೇ ಯುವಪೀಳಿಗೆಯನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಸುತ್ತದೆ ಎಂದು ಅಭಿಪ್ರಾಯಪಟ್ಟ ಡಾ. ಸಿ.ಜಿ.ಕುಶಾಲಪ್ಪ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದೇವೆ ಎಂಬ ಕೀಳಿರೆಮೆ ಯಾರಲ್ಲೂ ಇರಬಾರದು, ಸಾಧಕರಿಗೆ ಮಾಧ್ಯಮದ ಹಂಗಿಲ್ಲ ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ 6 ದಶಕಗಳಿಂದ ವಿದ್ಯಾಸೇವೆ ನೀಡುತ್ತಿರುವ ಶ್ರೀಮತಿ ಡಿ. ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಸಾಧನೆ ನಿಜಕ್ಕೂ ದಾಖಲಾಹ೯ ಎಂದೂ ಕುಶಾಲಪ್ಪ ಶ್ಲಾಘಿಸಿದರು. ಕನಾ೯ಟಕ ಸಕಾ೯ರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ತೀತೀರ ರೋಷನ್ ಅಪ್ಪಚ್ಚು ಮಾತನಾಡಿ, ವಿದ್ಯಾಥಿ೯ಗಳು ಯಾವುದೇ ಸಂದಭ೯ದಲ್ಲಿಯೂ ದುಶ್ಚಟಗಳಿಗೆ ಬಲಿಯಾಗಬೇಡಿ, ಒಮ್ಮೆ ದುಶ್ಚಟಕ್ಕೆ ಈಡಾದರೆ ಮತ್ತೆ ಅರಿಂದ ಹೊರಬರಲಾಗದೇ ಜೀವನದಲ್ಲಿ ಉದ್ದೇಶಿತ ಸಾಧನೆಯ ಗುರಿಯತ್ತ ಸಾಗುವುದು ಕಷ್ಟಸಾಧ್ಯವಾಗಲಿದೆ ಎಂದರು. ದೇಸೇವೆಯತ್ತಲೂ ಮನಸ್ಸು ಮಾಿ ಉತ್ತಮ ನಾಗರಿಕರಾಗಿ ಎಂದೂ ಅವರು ಕರೆ ನೀಡಿದರು. ಜೀವನದಲ್ಲಿ ಧ್ಯೇಯ ಇರಿಸಿಕೊಂಡು, ಅದನ್ನು ಸಾಧಿಸಲು ಶ್ರಮಿಸಿ ಎಂದು ಕರೆ ನೀಡಿದ ರೋಷನ್ ಅಪ್ಪಚ್ಚು, ಯಾವುದೇ ಗುರಿಯನ್ನಾದರೂ ಒಮ್ಮೆಗೆ ಸಾಧಿಸುವುದು ಕಷ್ಟಸಾಧ್ಯ. ಹಂತಹಂತವಾಗಿ ಗುರಿಯತ್ತ ಮುಂದಡಿ ಇರಿಸಿ ಎಂದೂ ಕಿವಿಮಾತು ಹಳಿದರು. ರೋಟರಿ ಜಿಲ್ಲೆ 3181 ನ ಮಾಜಿ ಗವನ೯ರ್ ಹೆಚ್. ಆರ್. ಕೇಶವ್ ಮಾತನಾಡಿ, ಮಕ್ಕಳಿಗೆ ಕಷ್ಟಗಳ ಅನುಭವ ಆಗದೇ ಹೋದರೆ, ಅವರಲ್ಲಿನ ಸುಪ್ತ ಪ್ರತಿಭೆ ಹೊರಹೊಮ್ಮುವುದಿಲ್ಲ, ನೀವು ಶಿಕ್ಷಣ ಪಡೆದ ಶಾಲೆಗೆ ಅಗತ್ವಿರುವ ಕೊಡುಗೆ ಕೊಡುವ ಮೂಲಕ ನಿಮ್ಮನ್ನು ಸಾಧಕರನ್ನಾಗಿ ಮಾಡಿದ ಸಂಸ್ಥೆಗೆ ನಿಮ್ಮ ಕೊಡುಗೆ ನೀಡಿ ಎಂದರು, ರೋಟರಿ ಸಂಸ್ಥೆಯಿಂದ ಕೋವಿಡ್ ಲಾಕ್ ಡೌನ್ ಸಂದಭ೯ 26 ಸಾವಿರ ಕಂಪ್ಯೂಟರ್ ಗಳನ್ನು ನೀಡಿರುವುದಾಗಿಯೂ ಹೇಳಿದ ಕೇಶವ್, ಈ ಮೂಲಕಸಾವಿರಾರು ವಿದ್ಯಾಥಿ೯ಗಳ ಶೈಕ್ಷಣಿಕ ಜೀವನಕ್ಕೆ ರೋಟರಿ ಮಹತ್ವದ ಕೊಡುಗೆ ನೀಡಿತ್ತು ಎಂದು ಮಾಹಿತಿ ನೀಡಿದರು. ಮಡಿಕೇರಿ ನಗರಸಭೆಯ ಮಾಜಿ ಪೌರಾಯುಕ್ತೆ ಬಿ.ಬಿ. ಪುಪ್ಪಾವತಿ ವಜ್ರದೀವಿಗೆ ಸ್ಮರಣ ಸಂಚಿಕೆ ಲೋಕಾಪ೯ಣೆಗೊಳಿಸಿ ಮಾತನಾಡಿ, ಪ್ರಾಮಾಣಿಕತೆ ಕಡಮೆಯಾದಾಗಲೆಲ್ಲಾ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಹೀಗಾಗಿ ಜೀವನದಲ್ಲಿ ಪ್ರಾಮಾಣಿಕರಾಗಿ ಬದುಕಿ ಎಂದು ಹೇಳಿದರಲ್ಲದೇ ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗಿನ ವಿದ್ಯಾಥಿ೯ಗಳಿಗೆ ಜೀವನಕ್ಕಾಗಿನ ಉದ್ಯೋಗಾವಕಾಶಗಳು ಅತ್ಯಧಿಕವಾಗಿದೆ, ಮೊಬೈಲ್ ಎಂಬ ಉಪಕರಣ ವಿದ್ಯಾಥಿ೯ಗಳ ಪಾಲಿಗೆ ಮಾಹಿತಿಯ ಕಣಜವಾಗಿದೆ ಎಂದರು. ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಕನ೯ಲ್ ಬಿ.ಜಿ.ವಿ. ಕುಮಾರ್ ಮಾತನಾಡಿ, 60 ವಷ೯ಗಳ ಹಿಂದೆ ಮಾದಾಪುರದ ಪುಟ್ಟ ಕಟ್ಟಡದಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಹತ್ತಾರು ಗ್ರಾಮಗಳ ಸಾವಿರಾರು ವಿದ್ಯಾಥಿ೯ಗಳಿಗೆ ವಿದ್ಯೆ ನೀಡುವ ಮೂಲಕ ಸುಶಿಕ್ಷಿತ ಸಮಾಜದ ನಿಮಾ೯ಣಕ್ಕೆ ಕಾರಣವಾಗಿದೆ. ಹಿಂದಿನ ಆಡಳಿತ ಮಂಡಳಿಯ ದೂರದೖಷ್ಟಿಯ ತೀಮಾ೯ನಗಳೂ ಈ ಸಂಸ್ಥೆಯನ್ನು ಪ್ರಬಲವಾಗಿ ಬೆಳೆಸಿದೆ ಎಂದರಲ್ಲದೇ, ಇದೇ ಶೈಕ್ಷಣಿಕ ಸಾಲಿನಿಂದ ಸಂಸ್ಥೆಯಲ್ಲಿ ಆಂಗ್ಲಮಾಧ್ಯಮ ಶಾಲೆಯನ್ನು ಪ್ರಾರಂಭಿಸುತ್ತಿರುವುಾಗಿ ಘೋಷಿಸಿದರು. ಶ್ರೀಮತಿ ಡಿ. ಚೆನ್ನಮ್ಮ ಕಾಲೇಜಿನ ಪ್ರಾಂಶುಪಾಲ ಚೆಯ್ಯಂಡ ಸಿ. ಮಂದಪ್ಪ ವಾಷಿ೯ಕ ವರದಿ ವಾಚಿಸಿ ಸಂಸ್ಥೆ ಸಾಗಿ ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ಡಿ. ಚೆನ್ನಮ್ಮ ಪ್ರೌಡಶಾಲೆಯ ಮುಖ್ಯ ಶಿಕ್ಷಕಿ ಕೆ.ಯು. ರೀಟಾ ಮತ್ತು ಉಪನ್ಯಾಸಕಿ ಪ್ರಮೀಳಾ ವೆಂಕಟೇಷ್ ನಿರೂಪಿಸಿದರು. ಸಂಸ್ಥೆಯ ಆಡಳಿತ ಮಂಡಳಿ ಪೋಷಕರಾದ ಎಂ.ಜಿ.ಬೋಪಣ್ಣ, ಕಾಯ೯ದಶಿ೯ ಎಂ.ಬಿ.ಬೋಪಣ್ಣ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ವೇದಿಕೆಯಲ್ಲಿದ್ದರು. ವಿದ್ಯಾಥಿ೯ಗಳಿಂದ ಪಥಸಂಚಲನ, ಸಾಮೂಹಿಕ ಅಂಗಸಾಧನೆ ಗಮನ ಸೆಳೆದವು. ಸಂಸ್ಥೆಯ ನಿವೖತ್ತ ಭೋದಕರಾದ ಎಂ.ಎಸ್. ಸುಬ್ರಹ್ಮಣ್ಯ, ಪಿ. ಸೋಮಯ್ಯ, ಸೋಮಶೇಖರ್, ಬಿ. ಸಿ. ಶಂಕರಯ್ಯ, ಭೋದಕೇತರ ವಗ೯ದ ಸಿಬ್ಬಂದಿಗಳಾದ ಎಸ್.ಸಿ. ಮಾಲತಿ, ಸಿ.ಆರ್. ಅಶೋಕ್ ಅವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಂಸ್ಥೆಯ ವಿದ್ಯಾಥಿ೯ನಿ ಅದವ್ಯಳನ್ನು ಸನ್ಮಾನಿಸಲಾಯಿತು.
ಸ್ನೇಹಸಮ್ಮಿಲನ :: ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿಯ ಹಳೇ ವಿದ್ಯಾಥಿ೯ಗಳ ಸ್ನೇಹ ಸಮ್ಮಿಲನ ಕಾಯ೯ಕ್ರಮವು ಸಂಭ್ರಮ ಸಡಗರದೊಂದಿಗೆ ಜರುಗಿತು. ಸಭಾ ಕಾಯ೯ಕ್ರಮ ಉದ್ಗಾಟಿಸಿ ಮಾತನಾಡಿದ ಹಳೇ ವಿದ್ಯಾಥಿ೯ ಎಂ.ಜಿ.ಬೋಪಣ್ಣ, ಈ ಶಿಕ್ಷಣ ಸಂಸ್ಥೆಯನ್ನು ಪ್ರಬಲವಾಗಿ ಕಟ್ಟಿ ಬೆಳೆಸುವಲ್ಲಿ ಹಿರಿಯರ ಶ್ರಮ ಸ್ಮರಿಸಿಕೊಂಡರು. ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಬಿ.ಎ.ನಾಣಿಯಪ್ಪ ಮಾತನಾಡಿ, ಅಂದಿನ ಕಾಲದಲ್ಲಿ 75 ಸಾವಿರ ರುಪಾಯಿ ವೆಚ್ಚದಲ್ಲಿ ಈ ಶಿಕ್ಷಣ ಸಂಸ್ಥೆಯ ಕಟ್ಟಡ ನಿಮಾ೯ಣವಾಗಿತ್ತು, ಸಂಸ್ಥೆಯ ಹಿರಿಯರು ಹಾಕಿಕೊಟ್ಟ ಮಾಗ೯ದಶ೯ನದಿಂದಲೇ ಇಂದಿಗೂ ಈ ಸಂಸ್ಥೆ ಸದೖಡವಾಗಿ ಮುನ್ನಡೆದಿದೆ ಎಂದರು. ಹಳೇ ವಿದ್ಯಾಥಿ೯ ವಕೀಲ ಕೆ.ಎಸ್. ರತನ್ ತಮ್ಮಯ್ಯ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನೆಲೆ ನಿಂತಿರುವ ಈ ಸಂಸ್ಥೆಯ ಸಾಧನೆ ನಾಡಿನ ಇತರ ಸಂಸ್ಥೆಗಳಿಗೂ ಮಾದರಿ ಎಂದು ಶ್ಲಾಘಿಸಿದರು. ಲೆಕ್ಕ ಪರಿಶೋಧಕ ಪಿ.ಡಬ್ಲ್ಯು. ಫ್ರಾನ್ಸಿಸ್ ಮಾತನಾಡಿ, ಮಕ್ಕಳಿಗೆ ಜೀವನದ ಸಂಕಷ್ಟಗಳ ಪರಿಚಯ ಇರಬೇಕು. ಆಗಲೇ ಉನ್ನತ ಸಾಧನೆಯತ್ತ ಗುರಿ ಕೂಡ ಇರುತ್ತದೆ ಎಂದು ಅಭಿಪ್ರಾಯಪಟ್ಟರು. ಕಾಫಿ ಬೆಳೆಗಾರ ಸಿ.ಪಿ. ಮುದ್ದಪ್ಪ, ಅರಣ್ಯ ಇಲಾಖೆಯ ಹಿರಿಯ ಸಹಾಯಕಿ ವಿಜಯಲಕ್ಷ್ಮಿ, ಕಾಫಿ ಬೆಳೆಗಾರ ಹೆಚ್.ಎಸ್. ಉತ್ತಯ್ಯ, ಉದ್ಯಮಿ ಬಿ.ವಿ. ವೆಂಕಪ್ಪ ಸಂಸ್ಥೆಯಲ್ಲಿ ಕಳೆದ ದಿನಗಳನ್ನು ಅವಲೋಕಸಿದರು. ಸಂಸ್ಥೆಯ ಹಳೇ ವಿದ್ಯಾಥಿ೯ ಸಂಘದ ಅಧ್ಯಕ್ಷ ಎಂ.ಜಿ.ಬೋಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಕನ೯ಲ್ ಬಿ.ಜಿ.ವಿ. ಕುಮಾರ್, ಎಸ್.ಸಿ.ಮಾಲತಿ, ಗಣೇಶ್ ಹೆಚ್.ಎಸ್. ಪ್ರಾಂಶುಪಾಲಸಿ.ಜಿ.ಮಂದಪ್ಪ, ಪ್ರೌಡಶಾಲಾ ಮುಖ್ಯ ಶಿಕ್ಷಕಿ ಕೆ.ಯು. ರೀಟಾ ವೇದಿಕೆಯಲ್ಲಿದ್ದರು. ಕಾಯ೯ಕ್ರಮವನ್ನು ಸಂಸ್ಥೆಯ ಹಳೇ ವಿದ್ಯಾಥಿ೯, ಪತ್ರಕತ೯ ಅನಿಲ್ ಹೆಚ್.ಟಿ. ನಿರೂಪಿಸಿದರು. ಉಪನ್ಯಾಸಕಿ ಕೆ.ಎಸ್. ಅಶ್ವಿನಿ ಕ್ರೀಡಾಸ್ಪಧೆ೯ಗಳ ವಿಜೇತರನ್ನು ಘೋಷಿಸಿದರು. ಸಂಸ್ಥೆಯ ಶಿಕ್ಷಕಿಯರಿಂದ ಆಕಷ೯ಕ ನೖತ್ಯ ಗಮನ ಸೆಳೆದರೆ, ಸಂಸ್ಥೆಯ ವಿದ್ಯಾಥಿ೯ಗಳಿಂದ ವೈವಿಧ್ಯಮಯ ಸಾಂಸ್ಕೖತಿಕ ಕಾಯ೯ಕ್ರಮಗಳು ಮನರಂಜಿಸಿದವು. ವಜ್ರಮಹೋತ್ಸವದ ಆಕಷ೯ಣೆಯಾಗಿ ಸರಿಗಮಪ ರಿಯಾಲಿಟಿ ಶೋನ ಆರ್.ಮಹೇಂದ್ರ, ಪ್ರಿಯಾ ಕುಂದಾಪುರ, ಶಶಿ ಸಿಂಚನಾ ತಂಡದಿಂದ ಹಾಡು ಮತ್ತು ನೖತ್ಯ ಕಾಯ೯ಕ್ರಮ ಮನಸೂರೆಗೊಂಡಿತ್ತು.
ಭೋಜನಶಾಲೆಯ ಉದ್ಘಾಟನೆ :: ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿಯ ವಜ್ರಮಹೋತ್ಸವ ಸಂದಭ೯ 25 ಲಕ್ಷ ರುಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿಮಿ೯ಸಲಾದ ಭೋಜನಶಾಲೆಯನ್ನು ಗಣ್ಯರು ಉದ್ಘಾಟಿಸಿದರು. ಈ ಭೋಜನಶಾಲೆಗೆ ಆಥಿ೯ಕ ನೆರವು ನೀಡಿದ ಮೀನಾಕ್ಷಿ ಭಟ್ ಹೆಸರನ್ನು ಇರಿಸಲಾಗಿದೆ. ಭೋಜನಶಾಲೆ ವೀಕ್ಷಿಸಿದ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಶಾಸಕರ ಅನುದಾನದಿಂದ 5 ಲಕ್ಷ ರುಪಾಯಿ ನೀಡುವುದಾಗಿ ಭರವಸೆ ನೀಡಿದರು.
ದಾರಿತಪ್ಪಿಸುವ ಅವಕಾಶಗಳನ್ನು ತಿರಸ್ಕರಿಸಿ :: ಡಾ. ಮಂಥರ್ ಗೌಡ :: ವಿದ್ಯಾಥಿ೯ ಜೀವನದಲ್ಲಿ ದಾರಿತಪ್ಪಲು ಸಾಕಷ್ಟು ಅವಕಾಶಗಳು ಇರುತ್ತದೆ. ಆದರೆ ಇಂಥ ಅವಕಾಶಗಳು ಎದುರಾದಾಗ ಅವುಗಳನ್ನು ತಿರಸ್ಕರಿಸಿ, ಜೀವನಕ್ಕೆ ಪ್ರಯೋಜನವಾಗುವಂಥ ಆದಶ೯ದ ಹಾದಿಯಲ್ಲಿ ಸಾಗಬೇಕೆಂದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಕಿವಿಮಾತು ಹೇಳಿದರು. ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿಯ ವಜ್ರಮಹೋತ್ಸವ ಸಂದಭ೯ದ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಮಂಥರ್ ಗೌಡ, ಸಾಂಸ್ಕೖತಿಕ ಕಾಯ೯ಕ್ರಮಗಳ ಮೂಲಕ ವಿದ್ಯಾಥಿ೯ಗಳಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರಲು ಸಾಧ್ಯವಾಗುತ್ತದೆ. ನೖತ್ಯ, ಹಾಡುಗಾರಿಕೆ ಮುಂತಾದ ಕ್ಷೇತ್ರದಲ್ಲಿ ಸಾಧನೆ ಮಾಡಲು ಶಾಲಾ ವೇದಿಕೆಯ ಸಾಂಸ್ಕೖತಿಕ ಕಾಯ೯ಕ್ರಮಗಳು ನೆರವಾಗುವುದರಿಂದಾಗಿ ಪಠ್ಯದ ಜತೆಗೇ ಪಠ್ಯೇತರ ಚಟುವಟಿಕಗಳಲ್ಲಿಯೂ ವಿದ್ಯಾಥಿ೯ಗಳಿಗೆ ಅವಕಾಶ ನೀಡಬೇಕು ಎಂದು ಕರೆ ನೀಡಿದರು. ಮಧ್ಯಪಾನ, ಧೂಮಪಾನ, ಮಾದಕ ದ್ರವ್ಯ ಸೇವನೆಯಂಥ ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಸಾಧನೆಯ ಹಾದಿಯಲ್ಲಿ ಮುಂದೆ ಸಾಗಬಹುದು ಎಂದೂ ಮಂಥರ್ ಹೇಳಿದರು. . ಶಿಕ್ಷಕರ ಪ್ರಾಮುಖ್ಯತೆ ಏನು ಎಂಬುದು ಶಿಕ್ಷಣ ಕಲಿತ ನಂತರದ ದಿನಗಳಲ್ಲಿ ಮನವರಿಕೆಯಾಗುತ್ತದೆ. ಶಿಕ್ಷಕ ವಗ೯ದವರನ್ನು ವಿದ್ಯಾಥಿ೯ಗಳು ಗೌರವಿಸುವ ಮೂಲಕ ತಮ್ಮ ಜೀವನದಲ್ಲಿ ಸಂಸ್ಕಾರವನ್ನು ತಂದುಕೊಳ್ಳಬೇಕು, ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಯಾವುದೇ ವ್ಯಕ್ತಿಯು ಉದ್ದೇಶಿತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದೂ ಅವರು ಹೇಳಿದರು.