ನಾಪೋಕ್ಲು ಜ.13 NEWS DESK : ಕ್ಯಾಪ್ಟನ್ ಅರೆಯಡ ಕೃತಿಕ ದೇವಯ್ಯ ಬಿಇಜಿ ಕೇಂದ್ರ ಪುಣೆಯಲ್ಲಿ ಜ.15 ರಂದು ನಡೆಯಲಿರುವ ಆರ್ಮಿ ಡೇ ಪರೇಡ್ -2025 ರಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ಆರ್ಮಿ ಏರ್ ಡಿಫೆನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಪ್ಟನ್ ಕೃತಿಕ ದೇವಯ್ಯ 2018 ರಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ್ದರು. ಇವರು ಮಡಿಕೇರಿ ತಾಲೂಕಿನ ಯವಕಪಾಡಿ ಗ್ರಾಮದ ಅರೆಯಡ ಜೀವನ್ ದೇವಯ್ಯ ಮತ್ತು ಬಬಿತ ದಂಪತಿಗಳ ಪುತ್ರಿ.
ವರದಿ : ದುಗ್ಗಳ ಸದಾನಂದ.