ಮಡಿಕೇರಿ ಜ.13 NEWS DESK : ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಜ.23 ಮತ್ತು 24 ರಂದು ಮಡಿಕೇರಿಯಲ್ಲಿ ನೀನಾಸಂ ತಿರುಗಾಟದ ನಾಟಕ ಪ್ರದಶ೯ನ ನಡೆಯಲಿದೆ. ನಗರದ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದಲ್ಲಿ (ಶ್ರೀ ಓಂಕಾರೇಶ್ವರ ದೇವಾಲಯ ಬಳಿ) ಜ.22 ರಂದು ಸಂಜೆ 6.30 ಗಂಟೆಗೆ ನೀನಾಸಂ ತಿರುಗಾಟದ ಅಂಗವಾಗಿ ವಿದ್ಯಾನಿಧಿ ವನಾರಸೆ (ಪ್ರಸಾದ್) ನಿದೇ೯ಶನದ ಅಂಕದ ಪರದೆ ಎಂಬ ನಾಟಕ ( ರಚನೆ:ಮರಾಠಿ ಮೂಲ: ಅಭಿರಾಮ್ ಭಡ್ಕಮಕರ್, ಕನ್ನಡಕ್ಕೆ: ಜಯಂತ ಕಾಯ್ಕಿಣಿ ) ಪ್ರದಶ೯ನಗೊಳ್ಳಲಿದೆ. ಜ.23 ರಂದು ಸಂಜೆ 6.30 ಗಂಟೆಗೆ ‘ಮಾಲತೀ ಮಾಧವ’ (ಮೂಲ ರಚನೆ: ಭವಭೂತಿ, ಕನ್ನಡ ರೂಪ ಮತ್ತು ನಿರ್ದೇಶನ: ಅಕ್ಷರ ಕೆ.ವಿ) ನಾಟಕಗಳು ಪ್ರದಶ೯ನಗೊಳ್ಳಲಿದೆ ಎಂದು ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಕಾಯ೯ದಶಿ೯ ಬಾಲಾಜಿ ಕಶ್ಯಪ್ ಮಾಹಿತಿ ನೀಡಿದ್ದಾರೆ.