ಸೋಮವಾರಪೇಟೆ NEWS DESK ಜ.15 : ಸಂಕ್ರಾಂತಿ ಹಬ್ಬದಂದು ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ಕೂತಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ಚಾವಡಿ ಕಟ್ಟೆಯಲ್ಲಿ ಬುಧವಾರ ವಿಶೇಷ ಪೂಜೆ ನಡೆಯಿತು. ಅನಾದಿಕಾಲದಿಂದಲು ನಡೆದುಕೊಂಡು ಬಂದಂತೆ ದೇವರ ಕಟ್ಟೆಯಲ್ಲಿ ಗ್ರಾಮದ ಒಕ್ಕಲಿಗ ಮನೆತನದ ಹೇಣಿಗೆ ತಂದಿಟ್ಟು ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಹೇಣಿಗೆ ಹೊತ್ತ ಮಹಿಳೆಯರು, ಗ್ರಾಮಸ್ತರು ದೇವರ ಕಟ್ಟೆಯ ಸುತ್ತ ಪ್ರದಕ್ಷಿಣೆ ಹಾಕಿ ನಂತರ ಸಮೀಪದ ಶಾಂತಳ್ಳಿಯ ಕುಮಾರಲಿಂಗೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದರು. ಈ ಸಂದರ್ಭ ಗ್ರಾಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಂ.ಜಯರಾಮ್, ಕಾರ್ಯದರ್ಶಿ ಯಾದವ್ ಕುಮಾರ್, ಉಪಾಧ್ಯಕ್ಷ ಕೆ. ಡಿ. ಗಿರೀಶ್, ಖಜಾಂಚಿ ಲಕ್ಷ್ಮಯ್ಯ, ಭಾನುಪ್ರಸಾದ್, ಭರತ್, ಜಿತೇಂದ್ರ, ಅರ್ಚಕ ಅನಂತರಾಮ್ ಹಾಗು ಗ್ರಾಮಸ್ಥರು ಇದ್ದರು.