ಸೋಮವಾರಪೇಟೆ NEWS DESK ಜ.15 : ಸೋಮವಾರಪೇಟೆಯ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 13 ಮಂದಿ ಜಯಗಳಿಸಿದರು. ಸಾಮಾನ್ಯ ಕ್ಷೇತ್ರದಿಂದ ಲೋಕೇಶ್ವರಿ ಗೋಪಾಲ್, ಜಲಜಾ ಶೇಖರ್, ಕವಿತಾ ವಿರೂಪಾಕ್ಷ, ಬಿ.ಕೆ. ವಿದ್ಯಾ, ಉಮಾ, ಕೆ.ಎಸ್. ಚಂದ್ರಾವತಿ, ವರಲಕ್ಷ್ಮಿ ಸಿದ್ದೇಶ್ವರ್, ಕೆ.ಎ. ಮಂಜುಳಾ, ಜೀತಾಶ್ರೀ ಅವರುಗಳು ಗೆಲುವು ಸಾಧಿಸಿದರು. ಹಿಂದುಳಿದ ವರ್ಗ ಎ. ವಿಭಾಗದಿಂದ ಬೇಬಿ ಚಂದ್ರಹಾಸ್, ಹಿಂದುಳಿದ ವರ್ಗ ಬಿ. ವಿಭಾಗದಿಂದ ಎಸ್.ಬಿ. ಗೀತಾ, ಪರಿಶಿಷ್ಟ ಜಾತಿ ವಿಭಾಗದಿಂದ ಎಸ್.ಬಿ. ಮೀನಾಕ್ಷಿ, ಪರಿಶಿಷ್ಟ ಪಂಗಡ ವಿಭಾಗದಿಂದ ಎಚ್.ಎಂ. ರಂಜಿತ ಅವರುಗಳು ಆಯ್ಕೆಯಾದರು.