ಮಡಿಕೇರಿ ಜ.16 NEWS DESK : ಮಡಿಕೇರಿ-ಭಾಗಮಂಡಲ ಮುಖ್ಯ ರಸ್ತೆಯ ದುರಸ್ತಿ ಕಾಮಗಾರಿಯು ಆರಂಭಗೊಂಡಿದೆ.
ಸ್ಥಳೀಯ ನಿವಾಸಿಗಳಲ್ಲದೆ ದಿನಕ್ಕೆ ಸಾವಿರಾರು ಪ್ರವಾಸಿಗರು ಓಡಾಡುವ ಈ ರಸ್ತೆಯು ತೀವ್ರ ಮಳೆಯಿಂದ ಹಾನಿಗೀಡಾಗಿದ್ದು, ಶ್ರೀ ಕಾವೇರಿ ಜಾತ್ರೆ ಸಂದರ್ಭ ಇದರ ದುರಸ್ತಿ ಕಾರ್ಯ ಕೈಗೊಂಡಿದ್ದರೂ, ಆ ಸಂದರ್ಭದಲ್ಲಿ ಸುರಿದ ಮಳೆಯ ಕಾರಣ ಅದು ಪರಿಪೂರ್ಣವಾಗಿರಲಿಲ್ಲ. ಇದನ್ನು ಮನಗಂಡ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಳೆ ಕಡಿಮೆ ಆಗಿರುವುದರಿಂದ ದುರಸ್ತಿ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಬೇಕೆಂದು ಅಧಿಕಾರಿಗಳಿಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ಶೀಘ್ರದಲ್ಲಿ ಮುಗಿಸಿ ಕೊಡುವುದಾಗಿ ಅಧಿಕಾರಿಗಳು ಸ್ಥಳೀಯರಿಗೆ ತಿಳಿಸಿದ್ದಾರೆ.