ವಿರಾಜಪೇಟೆ ಜ.18 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ವಿರಾಜಪೇಟೆ, ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದಲ್ಲಿ ಕೃಷಿ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ಮೂರ್ನಾಡು ವಲಯದ ಹೊದ್ದೂರು ವಾಟೆಕಾಡು ಕಾರ್ಯಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮಿ ಬಳಗಾನೂರಮಠ ಮಾತನಾಡಿ, ಕೃಷಿ ಸ್ವ- ಉದ್ಯೋಗ ಮಾಡುವುದರಿಂದ ಆತ್ಮಸ್ಥೈರ್ಯ ಬರುತ್ತದೆ. ಹಾಗೂ ಸಿರಿ ಧಾನ್ಯಗಳ ಬಗ್ಗೆ ಕೈಗಾರಿಕೆ ಮತ್ತು ಮಾರುಕಟ್ಟೆಯ ಕುರಿತು ಮಾಹಿತಿ ನೀಡಿದರು. ಸ್ವ-ಉದ್ಯೋಗ ಮಾಡುವವರಿಗೆ ಸರಕಾರದಿಂದ ಸಬ್ಸಿಡಿ ಸಿಗುತ್ತದೆ. ಅಣಬೆ ಕೃಷಿ, ಜೇನುಕೃಷಿ, ಹೈನುಗಾರಿಕೆ ಈ ರೀತಿಯ ಅನೇಕ ಸ್ವ-ಉದ್ಯೋಗದ ಬಗ್ಗೆ ಮಾಹಿತಿ ನೀಡಿದರು. ಕೃಷಿ ಮೇಲ್ವಿಚಾರಕರಾದ ವಸಂತ್ ಮಾತನಾಡಿ, ಕೃಷಿ ಸ್ವ-ಉದ್ಯೋಗವು ಕೃಷಿಕರಿಗೆ ಆದಾಯದ ಹೆಚ್ಚುವರಿ ಮೂಲವನ್ನು ಒದಗಿಸುತ್ತದೆ. ಪಶು ಪಾಲನೆ, ಹಸುಗಳು, ಕುರಿಗಳು, ಮೇಕೆಗಳು ಮತ್ತು ಕೋಳಿಗಳ ಸಾಕಾಣಿಕೆ ನಮ್ಮ ಆದಾಯಕ್ಕೆ ಒಂದು ಬಲ ವರ್ಧನೆ ಆಗುತ್ತದೆ. ಈ ರೀತಿಯಲ್ಲಿ ಸ್ವಉದ್ಯೋಗವು ಕೇವಲ ಯುವಕರಿಗೆ ಮಾತ್ರವಲ್ಲ ಗೃಹಿಣಿಯರಿಗೆ, ವೃದ್ಧರಿಗೆ ತಮ್ಮ ಗ್ರಾಮ ಅಥವಾ ಮನೆಯ ಮಟ್ಟದಲ್ಲಿ ಮಾಡಬಹುದು. ಇದರಿಂದ ಗ್ರಾಮೀಣ ಜನರಿಗೆ ಹೊಸ ಅವಕಾಶ ಒದಗಿಸುತ್ತದೆ. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ಪ್ರತಾಪ್, ಪ್ರಗತಿಪರ ಕೃಷಿಕರಾದ ದೇಚಮ್ಮ, ಸೇವಾ ಪ್ರತಿನಿಧಿ ಕಾವೇರಿ, ಸಂಘದ ಸದಸ್ಯರು, ಗ್ರಾಮಸ್ಥರು ಮತ್ತು ಸಿಎಸ್ಸಿ ಸೇವದರರಾದ ಕಾವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.