ಮಡಿಕೇರಿ ಜ.20 NEWS DESK : ನಾಪೋಕ್ಲು ಹೋಬಳಿಯ ನರಿಯದಂಡ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜ.29 ರಂದು ಬೆಳಗ್ಗೆ 11 ಗಂಟೆಗೆ ಪಿಂಚಣಿ ದಿನ ಕಾರ್ಯಕ್ರಮ ನಡೆಯಲಿದೆ. ಪಿಂಚಣಿ ದಿನದಂದು ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಸಾಶನಗಳ ಫಲಾನುಭವಿಗಳು ಕುಂದುಕೊರತೆ ನೋಂದಾಯಿಸುವಂತೆ ತಹಶೀಲ್ದಾರ್ ಪ್ರವೀಣ್ ಕುಮಾರ್ ಅವರು ತಿಳಿಸಿದ್ದಾರೆ.











