ಮಡಿಕೇರಿ ಜ.23 NEWS DESK : ಪ್ರಗತಿ ಮತ್ತು ಪ್ರಥಮ್ ಸಂಸ್ಥೆ ಮೈಸೂರು ಹಾಗೂ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ (ಇಂಗ್ಲಿಷ್) ಆಂಗ್ಲ ಭಾಷಾ ಮೇಳ ನಡೆಯಿತು. ಕಾರ್ಯಕ್ರಮದಲ್ಲಿ ಕೂಡಿಗೆ ಡಯಟ್ ನ ಉಪನ್ಯಾಸಕ ವಿಜಯ್ ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಪ್ರಥಮ್ ಸಂಸ್ಥೆಯ ಶಿಕ್ಷಕಿ ರಂಜಿತ ಕಾರ್ಯಕ್ರಮದ ರೂಪುರೇಷೆ ಯನ್ನು ವಿವರಿಸಿದರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆ ಉಪನ್ಯಾಸಕರಾದ ಅನಂತ್, ನಿವೃತ್ತ ಶಿಕ್ಷಕರಾದ ರಮೇಶ್, ಉಪಾಧ್ಯಕ್ಷರಾದ ಅರ್ಪಿತ, ಶಿಕ್ಷಕಿ ಜಾನಕಿ, ಡಯಟ್ ನ ಟೆಕ್ನಿಕಲ್ ಸಹಾಯಕ ಹರೀಶ್, ಮುಖ್ಯ ಶಿಕ್ಷಕರಾದ ವೆಂಕಟೇಶ, ಹಳೆಕೋಟೆ ಶಾಲೆಯ ಮುಖ್ಯ ಶಿಕ್ಷಕ ಟಿ.ಆರ್.ರಮೇಶ್, ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಮಕ್ಕಳು ಹಾಜರಿದ್ದರು. ಹಾಜರಿದ್ದರು. ಶಿಕ್ಷಕಿ ರಮ್ಯಾ ಸ್ವಾಗತಿಸಿದರು. ಶಿಕ್ಷಕಿ ಪುಷ್ಪಾವತಿ ವಂದಿಸಿದರು. ನಂತರ ಅನೇಕ ವಿಷಯಗಳ ಬಗ್ಗೆ ಮಕ್ಕಳು ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶನವನ್ನು ನೀಡಿದರು.