ಮಡಿಕೇರಿ ಜ.24 NEWS DESK : ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಬಿ.ಎಸ್ಸಿ ಅರಣ್ಯ ಸ್ನಾತಕ ಪದವಿಯಲ್ಲಿ ಹಾನರ್ಸ್ (HONS) ಅರಣ್ಯ ವಿಭಾಗದ ಪದವಿಯಲ್ಲಿ ಮರೂರು ಗ್ರಾಮದ ಎಂ.ಎಂ.ಸುಪ್ರಿತಾ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಡೆದ 9ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಿ, ಗೌರವಿಸಿದರು. ಈ ಸಂದರ್ಭ ಶಿವಮೊಗ್ಗ ವಿಶ್ವವಿದ್ಯಾಲಯದ ಉಪ ಕುಲಪತಿ ಆರ್.ಪಿ.ಜಗದೀಶ್, ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ.ಜಿ.ಎಂ.ದೇವಗಿರಿ, ಮೂಡಗರೆ ಕೃಷಿ ಇಲಾಖೆಯ ಡೀನ್ ಮತ್ತು ಹಿರಿಯೂರು ತೋಟಗಾರಿಕೆ ಇಲಾಖೆಯ ಡೀನ್ ಸೇರಿದಂತೆ ಪ್ರಾಧ್ಯಾಪಕ ವೃಂದ ಹಾಜರಿದ್ದರು. ಎಂ.ಎಂ. ಸುಪ್ರಿತಾ ಮಾರೂರು ಗ್ರಾಮದ ಹೆಬ್ಬಾಲೆ ಗ್ರಾ.ಪಂ ಸದಸ್ಯ ಹೆಚ್.ಸಿ.ಮಹದೇವ್ ಹಾಗೂ ಮಂಜಳಾ ದಂಪತಿಯ ಪುತ್ರಿ.ಇವರು ಈಗಾಗಲೇ ನಾಗರಿಕ ಸೇವಾ ಇಲಾಖೆಯ ವಿಭಾಗದ ಉನ್ನತ ಮಟ್ಟದ ತರಬೇತಿಯನ್ನು ಪಡೆದು ಉನ್ನತ ವ್ಯಾಸಂಗದಲ್ಲಿ ತೊಡಗಿದ್ದಾರೆ.