ಮೂರ್ನಾಡು ಜ.24 NEWS DESK : ಮೈಸೂರಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಭಾರತೀಯ ನೃತ್ಯಕಲಾ ಶಾಲೆಯ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಶೇ.100ರಷ್ಟು ಫಲಿತಾಂಶವನ್ನು ನೀಡಿದ್ದಾರೆ. ನೃತ್ಯಕಲಾ ಶಾಲೆಯ ಮೂರ್ನಾಡಿನ ವಿದ್ಯಾರ್ಥಿಗಳಾದ ವಿ.ವಿ.ಭಾರ್ಗವಿ, ಕೆ.ಎಂ.ಸೃಷ್ಟಿ, ಪಿ.ಟಿ. ಸವಿನ ಮತ್ತು ಸಿದ್ದಾಪುರದ ವಿದ್ಯಾರ್ಥಿಗಳಾದ ವಿ.ಜೆ.ಸೌಜನ್ಯ, ಕೆ.ಕೆ.ದಿವ್ಯ, ಬಿ. ಸಾನಿಕ ಇವರುಗಳು ಉನ್ನತ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ. ವಿ.ವಿ. ಭಾರ್ಗವಿ ಶೇ.90.3 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನಪಡೆದು ಕೊಂಡಿದ್ದಾಳೆ ಎಂದು ಭಾರತೀಯ ನೃತ್ಯಕಲಾ ಶಾಲೆಯ ನೃತ್ಯಗುರು ವಿದುಷಿ ಜಲಜನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಟಿ.ಸಿ.ನಾಗರಾಜ್, ಮೂರ್ನಾಡು.