ಮಡಿಕೇರಿ ಜ.24 NEWS DESK : ಗಣರಾಜ್ಯೋತ್ಸವದ ಅಂಗವಾಗಿ ಎಸ್‌ಕೆಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜ.26 ರಂದು ಕೂಡಿಗೆಯಲ್ಲಿ ಮಾನವ ಸರಪಳಿ ಮತ್ತು ಸೌಹಾರ್ದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಕೆ.ಎ.ಮುಹಮ್ಮದ್ ಸುಹೈಬ್ ಫೈಝಿ ಕೊಳಕೇರಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಹದಿನಾರು ವರ್ಷಗಳಿಂದ “ರಾಷ್ಟ್ರ ರಕ್ಷಣೆಗಾಗಿ ಸೌಹಾರ್ದತೆಯ ಸಂಕಲ್ಪ” ಎಂಬ ಧ್ಯೇಯದೊಂದಿಗೆ ಎಸ್‌ಕೆಎಸ್‌ಎಸ್‌ಎಪ್ ಸಂಘಟನೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಈ ಬಾರಿ ಜ.26 ರಂದು ಕೊಡಿಗೆಯಲ್ಲಿ ಸೌಹಾರ್ದ ಸಮ್ಮೇಳನ ನಡೆಯಲಿದ್ದು, ಅಂದು ಮಧ್ಯಾಹ್ನ 2.30 ಗಂಟೆಗೆ ಕುಶಾಲನಗರದ ಜಾತ್ರಾ ಮೈದಾದಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವರೆಗೆ ವಾಹನ ಜಾಥಾ ಹಾಗೂ ಕೂಡಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸೌಹಾರ್ದ ಸಂದೇಶ ಸಾರುವ ಮೆರವಣಿಗೆ ನಡೆಯಲಿದೆ. ದೇಶದ ಐಕ್ಯತೆಗಾಗಿ ಹಾಗೂ ನಾಡಿನ ಸಾಮರಸ್ಯಕ್ಕಾಗಿ, ರಾಷ್ಟ್ರದ ಭದ್ರತೆಗೆ ಒತ್ತು ನೀಡಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಮಾನವ ಸರಪಳಿಯ ಮೂಲಕ ಸೌಹಾರ್ದತೆಯ ಸಂದೇಶ ನೀಡಲಾಗುವುದು ಎಂದು ಶುಹೈಬ್ ಫೈಝಿ ಮಾಹಿತಿ ನೀಡಿದರು. ದೇಶದಲ್ಲಿ ಅಸಹಿಷ್ಣುತೆ ಮತ್ತು ದ್ವೇಷ ರಾಜಕೀಯ ಮಿತಿ ಮೀರುತ್ತಿರುವುದರಿಂದ ಯುವ ಪೀಳಿಗೆಗೆ ದೇಶದ ಭದ್ರತೆ ಮತ್ತು ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ. ಮತಾಂತರ ಶಕ್ತಿಗಳನ್ನು ತೊಡೆದು ಹಾಕಲು ಈ ಕಾರ್ಯಕ್ರಮ ಹೆಚ್ಚು ಉಪಯುಕ್ತವಾಗಿದ್ದು, ಜಾತಿ ಮತ ಭೇದವಿಲ್ಲದೆ ಎಲ್ಲರು ಒಗ್ಗಟ್ಟಾಗಿ ಬಾಳಬೇಕಾದ ಗುರಿಯನ್ನು ಹೊಂದಲಾಗಿದೆ. ಮೆರಣಿಗೆಯ ನಂತರ ನಡೆಯಲಿರುವ ಸೌಹಾರ್ದ ಸಮ್ಮೇಳನದಲ್ಲಿ ಶೈಖುನಾ ಎಂ.ಎಂ.ಅಬ್ದುಲ್ಲಾ ಫೈಝಿ ಎಡಪ್ಪಲಾ, ಅಬ್ದುರ್ರಹ್ಮಾನ್ ಮುಸ್ಲಿಯಾರ್, ಶೈಖುನಾ ಉಸ್ಮಾನ್ ಫೈಝಿ ಸುಂಟಿಕೊಪ್ಪ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ, ಡಾ.ಮಂತರ್ ಗೌಡ, ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮಿಗಳು, ಸೋಮವಾರಪೇಟೆ ಚರ್ಚ್ ಮುಖ್ಯ ಗುರುಗಳಾದ ಫಾದರ್ ಅವಿನಾಶ್ ಒಎಲ್, ಮಾಜಿ ಶಾಸಕರಾದ ಇಬ್ರಾಹಿಂ ಮಾಸ್ಟರ್, ಇಬ್ರಾಹಿಂ ಬಾತಿಶಾ ಶಂಸಿ ಕೊಡ್ಲಿಪೇಟೆ ಹಾಗೂ ಅನೇಕ ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರುಗಳು ಭಾಗವಹಿಸಲಿದ್ದಾರೆ. ಕ್ರಾರ್ಯಕ್ರಮಕ್ಕೆ ಸರ್ವರೂ ಜಾತಿ ಮತ ಭೇಧವಿಲ್ಲದೆ ಆಗಮಿಸಿ ಯಶಸ್ಸುಗೊಳಿಸಬೇಕಾಗಿ ಶುಹೈಬ್ ಫೈಝಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.