ಮಡಿಕೇರಿ ಜ.24 NEWS DESK : ಮನುಷ್ಯನ ದೇಹದಲ್ಲಿ ಪ್ರಮುಖ ಅಂಶವಾಗಿರುವ ರಕ್ತ ಕೂಡ ಔಷಧೀಯ ಗುಣ ಹೊಂದಿರುವುದರಿಂದ ಇಂದಿನ ಕಾಲದಲ್ಲಿ ಜೀವಸಂರಕ್ಷಕ ರಕ್ತಕ್ಕೆ ಬೇಡಿಕೆಯ ಪ್ರಮಾಣ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ರಕ್ತ ಸಂಗ್ರಹಣೆ ಮೂಲಕ ಕೊಡಗಿನ ಆಸ್ಪತ್ರೆಗಳಲ್ಲಿ ರಕ್ತದ ಸರಬರಾಜು ಅಧಿಕವಾಗಬೇಕಾಗಿದೆ ಎಂದು ಜಿಲ್ಲಾ ಸಹಾಯಕ ಔಷಧಿ ನಿಯಂತ್ರಕ ಅಧಿಕಾರಿ ಗುರುನಾಥ್ ಹೇಳಿದ್ದಾರೆ. ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ, ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘಕ್ಕೆ 50 ವಷ೯ಗಳ ಸಂಭ್ರಮದ ಹಿನ್ನಲೆಯಲ್ಲಿ ಆಯೋಜಿತ ರಕ್ತಸಂಗ್ರಹ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಗುರುನಾಥ್, ರಕ್ತದಾನವನ್ನು ಯಾರೂ ವೖತ್ತಿಯನ್ನಾಗಿ ಪರಿವತಿ೯ಸಿಕೊಳ್ಳಬಾರದು. ರಕ್ತವನ್ನು ದಾನ ನೀಡುವುದು ಮತ್ತೋವ೯ರ ಜೀವ ಉಳಿಸುವ ಮಾನವೀಯ ಕಾಯ೯ ಎಂದು ದಾನಿಗಳು ತಿಳಿದುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಪ್ರತೀಯೋವ೯ ಆರೋಗ್ಯವಂತ ವ್ಯಕ್ತಿಯು 3 ತಿಂಗಳಿಗೊಮ್ಮೆ ರಕ್ತ ನೀಡಬಹುದಾಗಿದೆ. ಕೊಡಗಿನ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಹೆಚ್ಚುತ್ತಿರುವ ರಕ್ತದ ಬೇಡಿಕೆಗೆ ಅನುಗುಣವಾಗಿ ಶಿಬಿರಗಳ ಮೂಲಕ ರಕ್ತದ ಸಂಗ್ರಹ ಕೂಡ ಹೆಚ್ಚಾಗಬೇಕೆಂದು ಗುರುನಾಥ್ ಹೇಳಿದರು. ರೆಡ್ ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಹೆಚ್.ಟಿ.ಮಾತನಾಡಿ, ಎಐ ನಂಥ ಅತ್ಯಾಧುನಿಕ ತಂತ್ರಜ್ಞಾನಗಳು ಎಷ್ಟೇ ಬಂದರೂ ಮಾನವನ ರಕ್ತಕ್ಕೆ ಪಯಾ೯ಯ ವ್ಯವಸ್ಥೆ ಕಂಡುಹಿಡಿಯಲು ಅಸಾಧ್ಯವಾಗಿದೆ. ಕೊಡಗು ಜಿಲ್ಲೆಯ ರಕ್ತ ನಿಧಿ ಕೇಂದ್ರಕ್ಕೆ ಮಾಸಿಕವಾಗಿ 500 ಯೂನಿಟ್ ರಕ್ತದ ಅಗತ್ಯತೆಯಿದ್ದು, ಮಾಸಿಕವಾಗಿ ಕನಿಷ್ಟ 10 ರಕ್ತಸಂಗ್ರಹಣೆಯ ಶಿಬಿರಗಳ ಅಗತ್ಯ ಕಂಡುಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಸಂಘಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು. 250 ಸದಸ್ಯ ಬಲದ ಕೊಡಗು ಔಷಧಿ ವ್ಯಾಪಾರಿಗಳ ಸಂಘವು ರಾಜ್ಯದಲ್ಲಿಯೇ ಅತ್ಯಂತ ಕಿರಿಯ ಸಂಘವಾಗಿದ್ದರೂ ರಾಷ್ಟ್ರೀಯ ಸಂಘಕ್ಕೆ ಕೊಡಗಿನಿಂದ ಅಂಬೆಕಲ್ ಜೀವನ್ ಕುಶಾಲಪ್ಪ ಅವರನ್ನು ಸಂಘಟನಾ ಕಾಯ೯ದಶಿ೯ಯನ್ನಾಗಿ ಕಳುಹಿಸುವ ಮೂಲಕ ಕೊಡಗು ಗಮನ ಸೆಳೆಯುವಂತಾಗಿದೆ ಎಂದು ಶ್ಲಾಘಿಸಿದರು. ಕೋವಿಡ್ ಲಾಕ್ ಡೌನ್ ದಿನಗಳಲ್ಲಿ ಜಿಲ್ಲೆಯ ಔಷಧಿ ವ್ಯಾಪಾರಿಗಳು ಜೀವದ ಹಂಗು ತೊರೆದು ಜನರ ಸೇವೆಗೆ ಮುಂದಾಗಿರುವುದನ್ನು ಸಮಾಜ ಸದಾ ಸ್ಮರಿಸುತ್ತದೆ ಎಂದೂ ಅನಿಲ್ ಹೆಮ್ಮೆಯಿಂದ ಹೇಳಿದರು. ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಗಾಯತ್ರಿ ಮಾತನಾಡಿ, ರಕ್ತದಾನಿಗಳಲ್ಲಿ ರಕ್ತ ನೀಡಿದ 24 ಗಂಟೆಗಳಲ್ಲಿಯೇ ಮತ್ತೆ ಹೊಸ ರಕ್ತದ ಸಂಚಾರ ಉಂಟಾಗಲಿದೆ. ರಕ್ತವನ್ನು ದಾನವಾಗಿ ನೀಡಲು ಯಾವುದೇ ಹಿಂಜರಿಕ ಬೇಕಾಗಿಲ್ಲ ಎಂದರು. ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘದ ಸಂಘಟನಾ ಕಾಯ೯ದಶಿ೯ ಮತ್ತು ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ, ರಾಷ್ಟ್ರವ್ಯಾಪಿ 12.50 ಲಕ್ಷ ಔಷಧಿ ವ್ಯಾಪಾರಸ್ಥರು ಮತ್ತು ಕನಾ೯ಟಕದಲ್ಲಿ 26 ಸಾವಿರ ಔಷಧಿ ವ್ಯಾಪಾರಸ್ಥರಿದ್ದಾರೆ. ದೇಶದ ಪ್ರಬಲ ಸಂಘಟನೆಯಾಗಿರುವ ಔಷಧಿ ವ್ಯಾಪಾರಿಗಳ ಸಂಘವು ಇದೀಗ ಸುವಣ೯ ಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನಲೆಯಲ್ಲಿ ಇಂದು ಇಡೀ ದೇಶದಲ್ಲಿ ಔಷಧಿ ವ್ಯಾಪಾರಸ್ಥರ ಸಂಘದಿಂದ ರಕ್ತದಾನ ಶಿಬಿರ ಆಯೋಜಿಸಲ್ಪಟ್ಟಿದೆ. ಇದು ಅತ್ಯಧಿಕ ಪ್ರಮಾಣದಲ್ಲಿ ರಕ್ತ ಸಂಗ್ರಹದ ಗಿನ್ನೀಸ್ ದಾಖಲೆಯಾಗುವ ನಿರೀಕ್ಷೆಯಿದೆ ಎಂದ ಹೇಳಿದರು. ಕಾಯ೯ಕ್ರಮದಲ್ಲಿ ಔಷಧಿ ವ್ಯಾಪಾರಸ್ಥರ ಸಂಘದ ಮಾಹಿತಿಯುಳ್ಳ ನೂತನ ಅ್ಯಪ್ ನ್ನು ಲೋಕಾಪ೯ಣೆ ಮಾಡಲಾಯಿತು. ಸಮಾರಂಭದಲ್ಲಿ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಜಂಟಿ ಕಾಯ೯ದಶಿ೯ ವಸಂತ್ ಕುಮಾರ್, ಉಪಾಧ್ಯಕ್ಷ ವಿನೋದ್ ಅಂಬೆಕಲ್, ಖಜಾಂಚಿ ಪ್ರಸಾದ್ ಗೌಡ,, ನಿದೇ೯ಶಕ ತಿಲಕ್ ಸೇರಿದಂತೆ ಹಲವರು ಹಾಜರಿದ್ದರು. ಜಿಲ್ಲೆಯಾದ್ಯಂತಲಿನ ಔಷಧಿ ವ್ಯಾಪಾರಿಗಳ ಸಂಘದ ಸದಸ್ಯರು ರಕ್ತದಾನ ಮಾಡಿದರು.