ಮಡಿಕೇರಿ ಜ.24 NEWS DESK : ಪುಟಾಣಿ ವಿಜ್ಞಾನ ಬಳಗದವರು ನಡೆಸಿದ ರಾಷ್ಟ್ರಮಟ್ಟದ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಚೇರಂಬಾಣೆ ಕೊಟ್ಟೂರು ರಾಜರಾಜೇಶ್ವರಿ ಶಾಲೆಯ ಒಟ್ಟು 68 ವಿದ್ಯಾರ್ಥಿಗಳು ಭಾಗವಹಿಸಿ ಉತ್ತೀರ್ಣರಾಗಿದ್ದಾರೆ. ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಚಕ್ಷ ಕಾವೇರಮ್ಮ ರಾಷ್ಟ್ರಮಟ್ಟದಲ್ಲಿ ಮೂರನೇ ಸ್ಥಾನ, 8ನೇ ತರಗತಿಯ ಟಿ.ಡಿ.ಭುವನ್ ರಾಜ್ಯಮಟ್ಟದಲ್ಲಿ 6ನೇ ಸ್ಥಾನ, 9ನೇ ತರಗತಿಯ ಹೆಚ್.ಎಲ್.ಮಂಜುಳ 6ನೇ ಸ್ಥಾನ, ಜಿಲ್ಲಾ ಮಟ್ಟದಲ್ಲಿ 10ನೇ ತರಗತಿಯ ಮೋಕ್ಷ ಬೋಪಣ್ಣ 5ನೇ ಸ್ಥಾನ, 9ನೇ ತರಗತಿಯ ಕೆ.ಜೆ.ತ್ರಿಶ 7 ನೇ ಸ್ಥಾನ, ತಾಲ್ಲೂಕು ಮಟ್ಟದಲ್ಲಿ 10ನೇ ತರಗತಿಯ ಕೆ.ಕೆ.ಇಂಚರ 5ನೇ ಸ್ಥಾನ, 8 ನೇ ತರಗತಿಯ ಪ್ರೇಕ್ಷ ಪೊನ್ನಮ್ಮ 5ನೇ ಸ್ಥಾನಪಡೆದು ಸಾಧನೆ ಮಾಡಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳೊಂದಿಗೆ ಮುಖ್ಯಶಿಕ್ಷಕರಾದ ಕವನ್ ಕುದುಪಜೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕೆ.ಬಿ.ಸ್ವರೂಪ್, ಗಣಿತ ಯೂ.ಬಿ.ಶಿಕ್ಷಕಿ ಟೀನಾ ಹಾಜರಿದ್ದರು.