![](https://newsdeskkannada.com/wp-content/uploads/2025/02/Z-ND-ADVT-16.jpg)
![](https://newsdeskkannada.com/wp-content/uploads/2025/02/Z-ADVT-TEACHERS-10.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-8.jpg)
ಮಡಿಕೇರಿ ಫೆ.15 NEWS DESK : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕೊಡಗು ಜಿಲ್ಲೆಯ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ (ಕೆಎಬಿಎಚ್‍ಐ) ವತಿಯಿಂದ ಅಂತಾರಾಷ್ಟ್ರೀಯ ಅಪಸ್ಮಾರ (ಮೂರ್ಛೆರೋಗ) ದಿನಾಚರಣೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಭೋದಕ ಆಸ್ಪತ್ರೆಯ ಉಪನ್ಯಾಸಕರ ಕೊಠಡಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆಒಐಎಂಎಸ್ ಸಂಸ್ಥೆಯ ಸ್ಥಾನಿಯ ವೈದ್ಯಾಧಿಕಾರಿ ಆಡಿ ಸತೀಶ್ ಸರ್ ಅವರು ಅಂತಾರಾಷ್ಟ್ರೀಯ ಮೂರ್ಛೆರೋಗ ದಿನಾಚರಣೆ 2025 ಘೋಷವಾಕ್ಯವಾದ “ರೋಗಗ್ರಸ್ಥೆಯನ್ನು ಮೀರಿ ಅಪಸ್ಮಾರದ ಅರಿವಿನೊಂದಿಗೆ ಜೀವನವನ್ನು ಸಶಕ್ತಗೊಳಿಸುವ” ಎಂಬ ಅಪಸ್ಮಾರ ರೋಗದ ಚಿಹ್ನೆಗಳನ್ನು ಮುಂಚಿತವಾಗಿ ರೋಗಿಯಲ್ಲಿ ಗುರುತಿಸುವ ಹಾಗೂ ಅಪಸ್ಮಾರ ರೋಗ ಬಂದ ರೋಗಿಯನ್ನು ಹೇಗೆ ಚಿಕಿತ್ಸೆಯನ್ನು ಕೊಡಿಸಬೇಕೆಂದು ನೆರೆದಿದ್ದ ವೈದ್ಯಕೀಯ ವಿದ್ಯಾರ್ಥಿಗಳಿಗೆ ತಿಳಿಸಿದರು. ಕೆಒಐಎಂಎಸ್ ಸಂಸ್ಥೆಯ ಸಾಮಾನ್ಯ ವೈದ್ಯಕೀಯ ವಿಭಾಗದ ವೈದ್ಯಧಿಕಾರಿಯಾದ ಆಡಿ ಚೇತನ್ ಮಾತನಾಡಿ, ಅಪಸ್ಮಾರ ಕಾಯಿಲೆಯ ಬಗೆಗೆ ನೆರೆದಿದ್ದ ವಿದ್ಯಾರ್ಥಿಗಳಿಗೆ ಅಪಸ್ಮಾರ ಖಾಯಿಲೆಯ ಉಪನ್ಯಾಸವನ್ನು ನೀಡಿದರು. ಹಾಗೂ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಕೊಡಗು ಜಿಲ್ಲೆಯ ಸಂಯೋಜಕರಾದ ವಿಕ್ರಮ್ ಆರ್ ಅವರು ಕೆಎಬಿಎಚ್‍ಐ ಕಾರ್ಯಕ್ರಮದ ಧ್ಯೇಯೋದೇಶಗಳ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಕೆಒಐಎಂಎಸ್ ಸಂಸ್ಥೆಯ ಆಡಳಿತಧಿಕಾರಿಗಳದ ರೋಹಿಣಿ, ಅರವಳಿಕೆ ವಿಭಾಗದ ಮುಖ್ಯಸ್ಥರು ಹಾಗೂ ವೈದ್ಯರಾದ ಆಡಿ ಅಮಿತಾ, ನಸಿರ್ಂಗ್ ವಿಭಾಗದ ಅಧಿಕಾರಿಯಾದ ದೇವಕಿ, ಭೌತಚಿಕಿತ್ಸೆ ವಿಭಾಗದ ಆಡಿ ಬೃಂದಾ, ಕೆಎಬಿಎಚ್‍ಐ ವಿಭಾಗದ ಆಡಿ ಕ್ರಿಸ್ಟೀ ಜೋಸ್, ವಾಕ್ ಮತ್ತು ಶ್ರವಣ ಚಿಕಿತ್ಸಕರಾದ ಕಾವ್ಯಶ್ರೀ, ಶ್ರೂಶ್ರ್ರಷಕ ಅಧಿಕಾರಿ ಧೃತಿ ಅವರು ಉಪಸ್ಥಿತರಿದ್ದರು.