![](https://newsdeskkannada.com/wp-content/uploads/2025/02/Z-ND-ADVT-18.jpg)
![](https://newsdeskkannada.com/wp-content/uploads/2025/02/Z-ADVT-TEACHERS-11.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-9.jpg)
ಸಿದ್ದಾಪುರ ಫೆ.15 NEWS DESK : ಅಮ್ಮತ್ತಿಯ ಶ್ರೀ ಚಾಮುಂಡೇಶ್ವರಿ ಪಾಷಣ ಮೂರ್ತಿ ದೇವಾಲಯದ 25ನೇ ವಾರ್ಷಿಕೋತ್ಸವ ಹಾಗೂ ನೇಮೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯದಲ್ಲಿ ದೈವ ದೇವರಿಗೆ ವಾದ್ಯದೊಂದಿಗೆ ಅಭಿಷೇಕ ಪೂಜೆ, ಅಲಂಕಾರ ಪೂಜೆ, ನಾಗ ಪೂಜೆ, ನಾಗಹೋಮ, ಅಶ್ಲೇಷ ಬಲಿ, ದುರ್ಗಾ ಪೂಜೆ, ದುರ್ಗ ಹೋಮ ನಡೆಯಿತು. ರಾತ್ರಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ನಂತರ ಪಂಜುರ್ಲಿ, ಪಾಷಾಣ ಮೂರ್ತಿ ಹಾಗೂ ಗುಳಿಗ ದೇವರುಗಳ ತೆರೆಮೋತ್ಸವ ಬೆಳಗಿನವರೆಗೆ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ರಾತ್ರಿ ಹಾಗೂ ಹಗಲು ದೇವಾಲಯದ ಆಡಳಿತ ಮಂಡಳಿ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ವಾರ್ಷಿಕೋತ್ಸವ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬಾನಂಗಲದಲ್ಲಿ ಆಕರ್ಷಕ ಪಟಾಕಿಗಳ ಶಬ್ದ ಉತ್ಸವ ಕ್ಕೆ ಮೆರಗು ತಂದಿತು. ಜಿಲ್ಲೆಯ ವಿವಿಧೆಡೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆ ಮಹೋತ್ಸವಕ್ಕೆ ಆಗಮಿಸಿದ್ದರು. ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಪ್ರಮುಖರಾದ ಕುಟ್ಟಂಡ ಸರಸ್ವತಿ ಹಾಗೂ ಲೋಕೇಶ್ ಮುತ್ತಪ್ಪ. ಖಜಾಂಜಿ ಉದ್ದಪಂಡ ಖುಷಿ ಅಯ್ಯಪ್ಪ. ಇನ್ನಿತರರು ಹಾಜರಿದ್ದರು.