

ಮಡಿಕೇರಿ NEWS DESK ಫೆ.16 : ಚೆಟ್ಟಳ್ಳಿಯ ಪೊನ್ನತ್ ಮೊಟ್ಟೆಯ ಶ್ರೀ ಶನೈಶ್ಚರ ದೇವಾಲಯದಲ್ಲಿ ಶ್ರೀ ಶನೈಶ್ಚರ, ಮಹಾಗಣಪತಿ ಹಾಗೂ ನವಗ್ರಹ ದೇವರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು. ಪುತ್ತೂರಿನ ಬ್ರಹ್ಮ ಶ್ರೀ ವೇದಮೂರ್ತಿ ಗಿರೀಶ ತಂತ್ರಿ ಅವರ ನೇತೃತ್ವದಲ್ಲಿ ಫೆ.14 ರಂದು ಸಾಮೂಹಿಕ ಪ್ರಾರ್ಥನೆ, ಪಂಚಗವ್ಯ ಪುಣ್ಯಾಹ ವಾಚನ, ಆಚಾರ್ಯ ವರ್ಣ, ಪ್ರಸಾದ ಪರಿಗ್ರಹ, ಪಶುದಾನ ಶುದ್ಧಿ, ಅಂಕುರ ಆರೋಹಣ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಕ್ಪಾಲಕ ಬಲಿ, ಮಹಾಗಣಪತಿ, ನವಗ್ರಹ ದೇವರ, ಆದಿವಾಸ ಪೂಜೆ ಶಯನಾದಿವಾಸ ಜರುಗಿತು. ಫೆ.15 ರಂದು ಬೆಳಿಗ್ಗೆ ಅಂಕುರ ಪೂಜೆ, ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ನವಗ್ರಹ ಶಾಂತಿ ಹೋಮ, ಮಹಾಗಣಪತಿ, ನವಗ್ರಹ ದೇವರ ಪ್ರತಿಷ್ಠಾ ಕಲಶ ಪೂಜೆ, ಮಹಾಗಣಪತಿ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಮಹಾಪೂಜೆ, ನವಗ್ರಹ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು.
ಸಂಜೆ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆ, ಬ್ರಹ್ಮಕಲಶ, ಕುಂಭೇಷ ಕರ್ಕರಿ ಪೂಜೆ, ನಿದ್ರಾಕಳಶ ಪೂಜೆ, ಶಯ್ಯಾ ಪೂಜೆ, ತತ್ವ ಕಲಶ ಪೂಜೆ, ಜೀವಕಲಶ ಪೂಜೆ, ಜೀವೋದ್ವಾಷಣೆ ಜಲೋದ್ಧಾರ, ಬಿಂಬಶುದ್ಧಿ, ಪಶುದಾನ ಪುಣ್ಯಾಹ ಪ್ರಸಾದ ಶುದ್ದಿ, ಆದಿವಾಸ ಪೂಜೆ, ಶಯನಾದಿ ವಾಸ ಮತ್ತು ಪ್ರಸಾದ ವಿತರಣೆಯಾಯಿತು. ಫೆ.16 ರಂದು ಗಣಪತಿ ಹೋಮ, ಶನೈಶ್ಚರ ಪ್ರತಿಷ್ಠಾ ಹೋಮ, ತತ್ವ ಹೋಮ, ಕಲಾ ಹೋಮ, ಬ್ರಹ್ಮಕಲಶ ಪೂಜೆ ಮತ್ತು ಮೀನಾ ಲಗ್ನ ಮುಹೂರ್ತದಲ್ಲಿ ಶನೈಶ್ಚರ ದೇವರ ಪ್ರತಿಷ್ಠೆ, ಅಷ್ಟ ಬಂಧ ಬ್ರಹ್ಮಕಲಶಾಭಿಷೇಕ, ಕುಂಭೇಷ ಕರ್ಕರಿ ಮಹಾಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ಮಹಾ ಪ್ರಾರ್ಥನೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿಸಲಾಯಿತು. ದೇವಾಲಯ ಆಡಳಿತ ಮಂಡಳಿಯ ಪ್ರಮುಖರು, ಸದಸ್ಯರು, ಚೆಟ್ಟಳ್ಳಿ, ಪೊನ್ನತ್ ಮೊಟ್ಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.