



ಮಡಿಕೇರಿ NEWS DESK ಫೆ.16 : ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣಗಳು, ಮೊಬೈಲ್ ಕಳ್ಳತನ ಹಾಗೂ ನಕಲಿ ಸಿಮ್ ಕಾರ್ಡ್ ಗಳ ಬಳಕೆಯಿಂದ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಮೊಬೈಲ್ ಅಂಗಡಿಯ ಮಾಲೀಕರಿಗೆ ಹಾಗೂ ಸಿಮ್ ಕಾರ್ಡ್ ವಿತರಕರಿಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸೈಬರ್ ಅಪರಾಧದ ಬಗ್ಗೆ ಜಾಗೃತಿ ಸಭೆ ಏರ್ಪಡಿಸಲಾಗಿತ್ತು. ಮುಂದಿನ ದಿನಗಳಲ್ಲಿ ಸಿಮ್ ಕಾರ್ಡ್ ವಿತರಣೆ ಹಾಗೂ ಹಳೆಯ ಮೊಬೈಲ್ ಗಳ ಮಾರಾಟ ಹಾಗೂ ಖರೀದಿ ಸಂದರ್ಭದಲ್ಲಿ ನೋಂದಣಿ ಪುಸ್ತಕ ನಿರ್ವಹಣೆ, ಸಂಪೂರ್ಣ ವಿಳಾಸ ಪಡೆದುಕೊಳ್ಳುವುದು, ಗುರುತಿನ ಚೀಟಿ ಹಾಗೂ ಮೊಬೈಲ್ ನಂಬರ್ ಪಡೆದುಕೊಳ್ಳುವುದು ಹೀಗೆ ಹಲವು ಅಂಶಗಳ ಬಗ್ಗೆ ಕೊಡಗು ಸಿಇಎನ್ ಠಾಣೆಯ ಡಿಎಸ್ಪಿ ರವಿ ಅವರು ಮಾಹಿತಿ ನೀಡಿದರು.