ಮಡಿಕೇರಿ NEWS DESK ಮಾ.2 : ಅಮ್ಮತ್ತಿ ಫ್ರೆಂಡ್ಸ್ ಹಾಗೂ ಕೊಡಗು ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ 6ನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾವಳಿ ಏಪ್ರಿಲ್ 23 ರಿಂದ 27 ರವರೆಗೆ ನಡೆಯಲಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅಮ್ಮತ್ತಿ ಫ್ರೆಂಡ್ಸ್ ಕ್ರೀಡಾಕೂಟದ ಆಯೋಜಕ ಶಮೀರ್ ಅಮ್ಮತ್ತಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಚಾಂಪಿಯನ್ ತಂಡಕ್ಕೆ ಕೊಡಗಿನ ಮುಸ್ಲಿಂ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ನಗದು ರೂ.101111 ಮತ್ತು ಟ್ರೋಫಿ, ದ್ವಿತೀಯ ರೂ.50555 ಮತ್ತು ಟ್ರೋಫಿ, ತೃತೀಯ ರೂ.20222 ಮತ್ತು ಟ್ರೋಫಿ, ನಾಲ್ಕನೇ ಬಹುಮಾನ ರೂ.10111 ಮತ್ತು ಟ್ರೋಫಿ ಹಾಗೂ ಹಲವಾರು ವೈಯುಕ್ತಿಕ ಟ್ರೋಫಿಗಳನ್ನು ನೀಡಲಾಗುವುದು. ಮೈದಾನ ಶುಲ್ಕ 3 ಸಾವಿರ ರೂ. ನಿಗಧಿ ಪಡಿಸಲಾಗಿದೆ ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8861775265 ನ್ನು ಸಂಪರ್ಕಿಸಬಹುದಾಗಿದೆ.











