
ಕುಶಾಲನಗರ ಮಾ.8 NEWS DESK : ಕುಶಾಲನಗರ 470ನೇ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಕುಶಾಲನಗರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷರಾದ ಸೆಲಿನ ಡಿ ಕುನ್ನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಹಾಯಕ ಪ್ರಾಧ್ಯಾಪಕಿ ಡಾ. ಎಂ.ರಶ್ಮಿ ಹಾಗೂ ಕಂದಾಯ ಇಲಾಖೆ ಆಹಾರ ನಿರೀಕ್ಷಕರಾದ ಎಂ.ಎಸ್.ಸ್ವಾತಿ ಪಾಲ್ಗೊಂಡು ದಿನದ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಬಿ.ಆರ್.ಶೈಲಾ ಮತ್ತು ಆಡಳಿತ ಮಂಡಳಿ ನಿರ್ದೇಶಕರುಗಳು ಇದ್ದರು. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಪ್ರಮುಖರಾದ ಟಿ.ಪಿ.ಜಯಪ್ರಕಾಶ್, ನೇತ್ರಾವತಿ, ಕೆ.ಎಸ್.ಮಂಜುನಾಥ್, ಶಾಮಿಯಾನ ಕೃಷ್ಣ, ಕೆ.ಆರ್.ಜಗದೀಶ್ ಮತ್ತು ಹಸನ್ ಅವುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲಾ ಮಕ್ಕಳ ಛದ್ಮವೇಷ ಸ್ಪರ್ಧೆ ಗಮನ ಸೆಳೆಯಿತು.









