


ಮಡಿಕೇರಿ ಮಾ.13 NEWS DESK : ಹೋಂಸ್ಟೇ ಅಸೋಸಿಯೇಷನ್ ಸೋಮವಾರಪೇಟೆ ವತಿಯಿಂದ ಹೊಸ ತೋಟ ಜಂಕ್ಷನ್ ಬಳಿ ಪ್ರವಾಸೋದ್ಯಮ ಸ್ಥಳಗಳ ಸೂಚನಾ ಫಲಕವನ್ನು ಅಳವಡಿಸಲಾಗಿದ್ದು, ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ.ರೋಹಿತ್ ಉದ್ಘಾಟಿಸಿ, ಮಾತನಾಡಿ ಸೂಚನಾ ಫಲಕವನ್ನು ಅಳವಡಿಸುವುದರಿಂದ ಪ್ರವಾಸಕರಿಗೆ ಅನುಕೂಲವಾಗುವುದು ಮತ್ತು ನಮ್ಮಿಂದ ಸಮಾಜಕ್ಕೆ ಒಂದು ಕೊಡುಗೆ ಇರುವುದು, ಇದೇ ರೀತಿ ಹಲವಾರು ಸೂಚನಾ ಫಲಕವನ್ನು ಸೋಮವಾರಪೇಟೆ ಭಾಗದಲ್ಲಿ ಅಳವಡಿಸುತ್ತಿರುವುದಾಗಿ ತಿಳಿಸಿದರು. ಈ ಸಂದರ್ಭ ಉಪಾಧ್ಯಕ್ಷ ಯೋಗೇಶ್ ಪಟೇಲ್, ಕಾರ್ಯದರ್ಶಿ ಅಭಿನಂದ್ ಹಾಗೂ ಸದಸ್ಯರುಗಳು ಹಾಜರಿದ್ದರು. ಹೋಂ ಸ್ಟೇ ಅಸೋಸಿಯೇಷನ್ ಕಾರ್ಯಾಗಾರ :: ಹೋಂ ಸ್ಟೇ ಅಸೋಸಿಯೇಷನ್ ಕಾರ್ಯಾಗಾರವನ್ನು ಮೌಂಟ್ರೋಸ್ ರೆಸಾರ್ಟ್ ನಲ್ಲಿ ನಡೆಸಲಾಯಿತು. ಕಾರ್ಯಾಗಾರದಲ್ಲಿ ಮಡಿಕೇರಿ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷೆ
ಮೊಂತಿ ಗಣೇಶ್ ಮಾತನಾಡಿ ಹೋಂ ಸ್ಟೇಗೆ ಸಂಬಂಧಪಟ್ಟ ಕಾನೂನು ನಿಯಮಗಳು, ನಿಬಂಧನೆಗಳು ಮತ್ತು ಮಾನದಂಡಗಳ ಬಗ್ಗೆ ವಿವರಿಸಿದರು. ಉಪಾಧ್ಯಕ್ಷ ನವೀನ್ ಅಂಬೆಕಲ್ ಹಾಗೂ ಸದಸ್ಯರು ಹಾಜರಿದ್ದರು.