


ಮಡಿಕೇರಿಮಾ.13 NEWS DESK : ಸೇವಾ ನಿರತ ಸಶಸ್ತ್ರ ಪಡೆಗಳ ಯೋಧರು, ನಿವೃತ್ತ ಸೈನಿಕರ ಜೊತೆ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವ ಮತ್ತು ಆವರ ಜೊತೆ ಸಂವಹನ ನಡೆಸಲು, ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾ.24 ರಂದು ಮಡಿಕೇರಿಯಲ್ಲಿ ಮಾಜಿ ಸೈನಿಕರ ಸಂಪರ್ಕ/ರ್ಯಾಲಿ ನಡೆಯಲಿದೆ. ನಗರದ ಕ್ಯಾಪಿಟಲ್ ಹಾಲ್ ನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಭೆ ನಡೆಯಲಿದ್ದು, ಪಿಂಚಣಿ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ಸ್ಥಳದಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಹಾಗೂ ವಿವಿಧ ರೀತಿಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿಕೊಳ್ಳಲು ಇದು ಸಹಕಾರಿಯಾಗಲಿದ್ದು, ಕೊಡಗಿನ ಸಶಸ್ತ್ರ ಪಡೆಗಳ ಕುಟುಂಬವು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದೆ. ಹೆಚ್ಚಿನ ಮಾಹಿತಿಗಾಗಿ 6360742654 ಅಥವಾ ಮಾಜಿ ಸೈನಿಕರ ಶಾಖೆ, ಪ್ರಧಾನ ಕಚೇರಿ ಸಂಪರ್ಕಿಸಬಹುದಾಗಿದೆ.