


ಮಡಿಕೇರಿ ಮಾ.15 NEWS DESK : ವಿದೇಶಿ ಪ್ರವಾಸಿಗರ ಭೇಟಿ ಸಂದರ್ಭ ಕಾನೂನು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವಂತೆ ಹೋಟೆಲ್, ರೆಸಾರ್ಟ್, ಹೋಂಸ್ಟೇ ಮಾಲೀಕರುಗಳಿಗೆ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೂಚನೆ ನೀಡಿದ್ದಾರೆ. ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ಮಡಿಕೇರಿ ನಗರ, ಸುತ್ತ ಮುತ್ತಲ ಹೋಟೆಲ್, ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರುಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಪ್ರವಾಸಿಗರ ತಾಣವಾಗಿರುವ ಮಡಿಕೇರಿ ನಗರಕ್ಕೆ ಅಸಂಖ್ಯಾತ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಪ್ರವಾಸಿಗರಿಗೆ ಆತಿಥ್ಯವನ್ನು ಒದಗಿಸುವ ಸಮಯದಲ್ಲಿ ಪಡೆದುಕೊಳ್ಳಬೇಕಾದ ದಾಖಲೆಗಳು, ನಿರ್ವಹಿಸಬೇಕಾದ ದಾಖಲೆಗಳು, ವಿದೇಶೀ ಪ್ರವಾಸಿಗರ ಭೇಟಿಯ ಸಮಯದಲ್ಲಿ ಕಾನೂನು ಪ್ರಕಾರ ನಡೆಸಬೇಕಾದ ನೋಂದಣಿ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಲಾಯಿತು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್.ಸುಂದರ್ ರಾಜ್, ಮಡಿಕೇರಿ ನಗರದ ಪೊಲೀಸ್ ಅಧಿಕಾರಿಗಳು ಮತ್ತು ಹೋಟೆಲ್, ರೆಸಾರ್ಟ್, ಹೋಂಸ್ಟೇ ಮಾಲೀಕರುಗಳ ಸಂಘಗಳ ಪದಾಧಿಕಾರಿಗಳು, ಮಾಲೀಕರುಗಳು ಹಾಜರಿದ್ದರು.