


ಮಡಿಕೇರಿ NEWS DESK ಮಾ. 16 – ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಶಿಸ್ತು, ಜೀವನಮೌಲ್ಯಗಳನ್ನು ಸರಿಯಾದ ರೀತಿಯಲ್ಲಿ ಕಲಿಸಿಕೊಡಬೇಕು. ಸ್ವಚ್ಚಂದ ಜೀವನದ ಬಗೆಗಿನ ಎಚ್ಚರಿಕೆಯನ್ನೂ ಇಂದಿನ ಮಕ್ಕಳಿಗೆ ತಿಳಿಹೇಳುವುದು ಅಗತ್ಯ ಎಂದು ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕಿವಿಮಾತು ಹೇಳಿದರು. ನಗರದ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಯುಕೆಜಿ ವಿದ್ಯಾಥಿ೯ಗಳಿಗೆ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹುಟ್ಟಿಂದನಿಂದಲೇ ಮಕ್ಕಳನ್ನು ಅತಿಯಾದ ಪ್ರೀತಿಯಿಂದ ಪೋಷಕರು ಸಲಹುತ್ತಾ ಮಕ್ಕಳು ಮಾಡಿದ್ದೆಲ್ಲವೂ ಸರಿ ಎಂದು ಭಾವಿಸುತ್ತಾರೆ. ಇದರಿಂದಾಗಿ ಸ್ವಚ್ಚಂದತೆಯನ್ನು ಹೆಚ್ಚಾಗಿಯೇ ಮಕ್ಕಳು ಬೆಳೆಸಿಕೊಂಡು ಸಮಾಜದಲ್ಲಿ ದಾರಿ ತಪ್ಪುವ ಸಾಧ್ಯತೆಯೂ ಹೆಚ್ಚಾಗಿದೆ. ಇಂಥ ಸಂದಭ೯ ಜೀವನಮೌಲ್ಯ, ಶಿಸ್ತನ್ನು ಕೂಡ ಸರಿಯಾದ ರೀತಿಯಲ್ಲಿ ಸರಿಯಾದ ವಯಸ್ಸಿನಲ್ಲಿಯೇ ಕಲಿಸುವ ಮೂಲಕ ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ ಎಂದು ಅನಂತಶಯನ ಹೇಳಿದರು. ತಮ್ಮ ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆ, ಶಿಕ್ಷಕ ವಗ೯ದ ಬಗ್ಗೆ ಪೋಷಕರು ನಂಬಿಕೆ ಹೊಂದಿರಬೇಕು. ಶಿಕ್ಷಣ ಸಂಸ್ಥೆಗಳೇ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಕೇಂದ್ರಗಳೆಂದು ಮರೆಯಬಾರದು ಎಂದು ಕಿವಿಮಾತು ಹೇಳಿದ ಅನಂತಶಯನ, ಕೊಡಗು ವಿದ್ಯಾಲಯವು ಆದ್ಯಾತ್ಮಿಕ ಸಾಧಕ ಸದ್ಗುರು ಜಾಕ್ ಸುಬ್ಬಯ್ಯ ಅವರಿಂದ ಸ್ಥಾಪಿಸಲ್ಪಟ್ಟ ಕಾರಣದಿಂದ ಇಂದಿಗೂ ಈ ಸಂಸ್ಥೆಯು ಸದಾ ಸಂಸ್ಕಾರಯುತ ಶಿಕ್ಷಣಕ್ಕೆ ಹೆಸರಾಗಿದೆ ಎಂದು ಶ್ಲಾಘಿಸಿದರು. ಸಾಧಿಸುವ ಛಲವಿದ್ದಲ್ಲಿ ಯಾವುದೇ ವ್ಯಕ್ತಿಯೂ ಎಷ್ಟೇ ಎತ್ತರದ ಬೆಟ್ಟ, ಗುಡ್ಡಗಳನ್ನು ಸಲೀಸಾಗಿ ಏರಬಲ್ಲ. ಎಷ್ಟೇ ದೂರದವರೆಗೂ ಸಮುದ್ರದಲ್ಲಿ ಈಜಬಲ್ಲ,ಗಗನದಲ್ಲಿ ಹಾರಬಲ್ಲ ಸಾಮಥ್ಯ೯ ಹೊಂದಬಲ್ಲ ಎಂದು ಹೇಳಿದ ಅನಂತಶಯನ, ಛಲ ಹಾಗೂ ಕಠಿಣ ಪರಿಶ್ರಮ ಇಂಥ ಸಾಧನೆಗೆ ಅತ್ಯಗತ್ಯ ಎಂದು ಹೇಳಿದರು. ದೊಡ್ಡ ಮಟ್ಟದ ಸಾಧನೆಯ ಕನಸುಗಳನ್ನು ಕಾಣಿ ಎಂದು ಕರೆ ನೀಡಿದ ಅವರು, ಬೆಟ್ಟಗುಡ್ಡಗಳು ಅವುಗಳ ಎಚ್ಚರದಿಂದ ಮಾತ್ರವೇ ದೊಡ್ಡವು ಎನಿಸಿಕೊಂಡಿಲ್ಲ. ಬದಲಿಗೆ ಅವುಗಳು ಮಾನವನಿಗೆ ಒಡ್ಡುವ ಸವಾಲಿನಿಂದಾಗಿ ನಿಜವಾಗಿಯೂ ಅವುಗಳು ಹಿರಿಯದ್ದಾಗಿವೆ ಎಂದು ಹೇಳಿದರು. ಎಂದಿಗೂ ಪುಟ್ಟ ಮಕ್ಕಳು ಇತರರೊಂದಿಗೆ ಜಗಳವಾಡದೇ ಗೆಳೆತನ ಕಾಪಾಡಿಕೊಳ್ಳಿ , ಗೆಳೆತನವೇ ಜೀವನದ ಬಹುದೊಡ್ಡ ಸಂಪತ್ತಾಗಿದೆ ಎಂಬುದನ್ನು ಮರೆಯದಿರಿ ಎಂದೂ ಅನಂತಶಯನ ಪುಟಾಣಿಗಳಿಗೆ ಕಿವಿಮಾತು ಹೇಳಿದರು. ಕಾಯ೯ಕ್ರಮದಲ್ಲಿ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ವ್ಯವಸ್ಥಾಪಕರಾದ ರವಿ ಪಿ. ವೇದಿಕೆಯಲ್ಲಿದ್ದರು. ವಿದ್ಯಾಥಿ೯ನಿ ಶಾವಿ೯ ಭರತ್ ಸ್ವಾಗತಿಸಿ, ಸ್ಟಿಫಾನಿಯಾ ಸ್ಟ್ಯಾನಿ, ಆಂಚಲ್ ಅಯ್ಯಪ್ಪ ಮತ್ತು ಶಾವಿ೯ಕ್ ಅನುಭವ ಹಂಚಿಕೊಂಡ ಕಾಯ೯ಕ್ರಮದಲ್ಲಿ ಶಿಕ್ಷಕಿ ವೀಣಾ ಎಂ.ಎಂ.ನಿರೂಪಿಸಿ, ಶಿಕ್ಷಕಿಯರಾದ ಟಿ.ಪಿ.ರಮ್ಯ ಹಾಗೂ ಬಿ.ಬಿ.ಭಾರತಿ ನಿವ೯ಹಿಸಿದರು. ಐಶಾನಿ ವಂದಿಸಿದರು. ಯುಕೆಜಿ ವಿದ್ಯಾಥಿ೯ಗಳಿಂದ ಅತ್ಯಾಕಷ೯ಕ ಸಾಂಸ್ಕೖತಿಕ ಕಾಯ೯ಕ್ರಮಗಳು ಮನಸೆಳೆದವು.