


ಮಡಿಕೇರಿ ಮಾ.17 NEWS DESK : ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಹೋಟೆಲ್, ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರುಗಳ ಸಭೆ ನಡೆಯಿತು. ಸಭೆಯಲ್ಲಿ ಠಾಣಾಧಿಕಾರಿಗಳು ವಿದೇಶಿ ಪ್ರವಾಸಿಗರ ಭೇಟಿ ಸಂದರ್ಭ ಕಾನೂನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಪ್ರವಾಸಿಗರಿಂದ ಪಡೆದುಕೊಳ್ಳಬೇಕಾದ ದಾಖಲೆಗಳು, ನಿರ್ವಹಿಸಬೇಕಾದ ದಾಖಲೆಗಳು ಹಾಗೂ ವಿದೇಶಿ ಪ್ರವಾಸಿಗರ ಭೇಟಿಯ ಸಮಯದಲ್ಲಿ ಕಾನೂನು ಪ್ರಕಾರ ನಡೆಸಬೇಕಾದ ನೋಂದಣಿ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಲಾಯಿತು.