


ಸೋಮವಾರಪೇಟೆ ಮಾ.17 NEWS DESK : ಕುಮಾರಳ್ಳಿ ಶ್ರೀ ಸಬ್ಬಮ್ಮ ಭದ್ರಕಾಳಿ ದೇವಿಯ ಪ್ರಧಾನ ಶಿಲಾ ಪ್ರತಿಮೆ ಪ್ರತಿಷ್ಠಾಪನೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಹೆದ್ದೇವರ ಗುಡಿಯಲ್ಲಿ ಗಣಪತಿ ಪ್ರಾರ್ಥನೆ ನೆರವೇರಿಸಿ, ಶ್ರೀ ಸಬ್ಬಮ್ಮ ಬನದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿತು. ನಂತರ ಪ್ರಸಾದ ವಿತರಿಸಲಾಯಿತು. ಮರುದಿನ ಹೆದ್ದೇವರ ಗುಡಿಯಿಂದ ಸಬ್ಬಮ್ಮ ಸುಗ್ಗಿ ಬನದ ವರೆಗೆ 160 ಕಳಸಗಳನ್ನು ಹೊತ್ತ ಗ್ರಾಮದ ಮಹಿಳೆಯರು ಮೆರವಣಿಗೆ ನಡೆಸಿದರು. ಶ್ರೀ ಸಬ್ಬಮ್ಮ ದೇವಿ ಶಿಲೆಗೆ ಕ್ಷೀರ, ಪಂಚಾಮೃತ, ಎಳೆನೀರು ಅಭಿಷೇಕ ಮಾಡಲಾಯಿತು. ಗ್ರಾಮದ ಸಮೃದ್ಧಿ, ಮಳೆಗಾಗಿ ಗ್ರಾಮಸ್ಥರು ಸಾಮೂಹಿಕ ಪೂಜೆ ನಡೆಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಮಾರಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಯು.ಕೆ.ದೇಶರಾಜು, ಹಗ್ಗಡಮನೆ ಶಾಂತಮಲ್ಲಿಕಾರ್ಜುನ ದೇವಾಲಯ ಸಮಿತಿ ಅಧ್ಯಕ್ಷ ಟಿ.ಪಿ.ಚಂಗಪ್ಪ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ತಮ್ಮಯ್ಯ, ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ.ಲೋಕೇಶ್, ಉದ್ಯಮಿ ಹರಪಳ್ಳಿ ರವೀಂದ್ರ, ನಿವೃತ್ತ ಇಂಜಿನಿಯರ್ ಜಯರಾಮ್ ಇದ್ದರು.