



ವಿರಾಜಪೇಟೆ NEWS DESK ಮಾ.23 : ವಿರಾಜಪೇಟೆಯ ಶ್ರೀ ಮುತ್ತಪ್ಪನ್ ದೇವಸ್ಥಾನ ಸಮಿತಿ ಆದಿ ಪುರಾತನ ಘಟ್ಟದಿಂದ ನಡೆದುಕೊಂಡು ಬಂದ ಪದ್ದತಿಯಂತೆ ಒಂದೇ ದೇಗುಲದಲ್ಲಿ ಸುಧೀರ್ಘ ಕಾಲ ದೈವ ಸೇವೆ ಮಾಡುವ ಪೂಜಾಕರ್ಮಿಗಳಿಗೆ ನೀಡಲಾಗುವ ಗೌರವ ಸೂಚಕವಾದ ಪಣಿಕರ್ ಪಟ್ಟ ಎಡಯನ್ನೂರು ನಿವಾಸಿ ಶ್ರೀ ರಾಜನ್ ಅವರಿಗೆ ನೀಡಿ ಗೌರವಿಸಿತು. ವಿರಾಜಪೇಟೆ ನಗರದ ಮೀನುಪೇಟೆಯ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಾಲಯದ ವತಿಯಿಂದ 81 ನೇ ವಾರ್ಷಿಕ ತೆರೆ ಮಹೋತ್ಸವ ನಡೆಯಿತು. ಈ ಸಂಧರ್ಭ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕಾನಾಡ್ ಎಡಯನ್ನೂರು ನಿವಾಸಿ ನೆಲ್ಲಿತರಸ್ಸಿಯಿಲ್ ಚಂದು ಪಣಿಕರ್ ಎಂಬುವವರ ಪುತ್ರ ರಾಜನ್ (64) ಅವರಿಗೆ ದೇಗುಲದಲ್ಲಿ ಸಲ್ಲಿಸಿದ ಸುದೀರ್ಘ ದೈವ ಕೋಲ ಸೇವೆಯನ್ನು ಪರಿಗಣಿಸಿ ಪಣಿಕರ್ ಪಟ್ಟ ನೀಡಲಾಯಿತು. ಕೇರಳ ರಾಜ್ಯದ ಸಾಂಪ್ರದಾಯಿಕ ಪುರಾತನ ದೇವಾಲಯಗಳಲ್ಲಿ ಸೇವೆ ಮಾಡುವ ವಿಶೇಷ ವ್ಯಕ್ತಿಗಳನ್ನು ಗುರುತಿಸುವುದು ವಾಡಿಕೆಯಾಗಿದೆ. ದೇವಾಲಯಗಳಲ್ಲಿ ನಡೆಯುವ ವಿಶೇಷ ಪೂಜೆಗಳು, ವಾರ್ಷಿಕ ಉತ್ಸವಗಳು ಹಾಗೂ ಇತರ ಸೇವೆಗಳಲ್ಲಿ ಸಕ್ರೀಯರಾಗಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟ ವ್ಯಕ್ತಿಗಳನ್ನು ಗಣನೆ ಮಾಡುವುದು ಸಾಂಪ್ರದಾಯವಾಗಿದೆ. ಶ್ರೀ ರಾಜನ್ ಅವರ ತಂದೆ ಚಂದು ಪಣಿಕರ್, ತಾತ ಕಣ್ಣನ್ ಪಣಿಕರ್ ಅವರುಗಳ ಕುಟುಂಬ ಶ್ರೀ ಮುತ್ತಪ್ಪನ್ ದೈವದ ವಿವಿಧ ಪ್ರಕಾರಗಳ ಕೋಲಗಳನ್ನು ಕೇರಳ ,ಕರ್ನಾಟಕ ರಾಜ್ಯದ ವಿವಿದೆಡೆಗಳಲ್ಲಿ ಕೋಲ ಕಟ್ಟಿ ನಡೆಸಿಕೊಂಡು ಬಂದವರು. ಇವರುಗಳ ಸೇವೆ ಸುದೀರ್ಘ ಅವದಿಗೆ ಮೀಸಲಾಗಿರುತ್ತದೆ. ಕೆಲವು ಅಸಾಂಧರ್ಬಿಕ ಸಮಯದಲ್ಲಿ ಕುಟುಂಬಕ್ಕೆ ಹತ್ತಿರವಾದ ಇನ್ನೊಂದು ಮನೆತನಕ್ಕೆ ಸೇರಿದ ಕುಟುಂಬ ವ್ಯಕ್ತಿಗಳಿಂದ ದೈವ ಕಾರ್ಯಗಳು ನಡೆಸುವ ಪ್ರಮೇಯವಾಗುತ್ತದೆ. ರಾಜನ್ ಅವರು ತನ್ನ ಅಜ್ಜ ಕಣ್ಣನ್ ಪಣಿಕರ್ ಅವರೊಂದಿಗೆ ವಿರಾಜಪೇಟೆ ಮುತ್ತಪ್ಪ ದೇಗುಲಕ್ಕೆ ಆಗಮಿಸುತಿದ್ದರು. ಬಳಿಕ ತಂದೆಯೊಂದಿಗೆ ಹೀಗೆ ಮುಂದುವರೆದ ದೈವ ಕೋಲ ಕಟ್ಟುವ ಕಾಯಕದಲ್ಲಿ ತೊಡಗಿ ಸುಮಾರು 50 ವರ್ಷಗಳು ಸಂದಿವೆ ಸುಮಾರು 12 ವರ್ಷಗಳ ಕಾಲ ವಸೂರಿ ಮಾಲ ತೆರೆನಂತರ ಮೂವತ್ತು ವರ್ಷಗಳು ಶಾಸ್ತಪ್ಪನ್ ತೆರೆಯನ್ನು ಕಟ್ಟುತ್ತಾ ಬಂದಿದ್ದಾರೆ. ಇವರು ಶ್ರೀ ಚೈತನ್ಯ ಮಡಪ್ಪುರ ಶ್ರೀ ಮುತ್ತಪ್ಪನ್ ದೇವಸ್ಥಾನಕ್ಕೆ ನೀಡಿರುವ ಸುದೀರ್ಘ ಸೇವೆಯನ್ನು ಪರಿಗಣಿಸಿ ದೇವಾಲಯದ ಆಡಳಿತ ಮಂಡಳಿ ಮತ್ತು ಉತ್ಸವ ಸಮಿತಿ ಹಾಗೂ ಭಕ್ತಜನಗಳ ಸಮ್ಮುಖದಲ್ಲಿ ದೈವಿಕ ವಿಧಿವಿಧಾನಗಳನ್ನು ಅನುಸರಿಸಿಕೊಂಡು ಶಾಸ್ತ್ರದ ಪ್ರಕಾರ ಶ್ರೀ ರಾಜನ್ ಅವರಿಗೆ ಗೌರವ “ಪಣಿಕರ್ ” ಪಟ್ಟ ನೀಡಿ ಗೌರವಿಸಲಾಯಿತು. ಆಡಳಿತ ಮಂಡಳಿ ಸದಸ್ಯರು ಮತ್ತು ಪ್ರಮುಖರು ರಾಜನ್ ಅವರಿಗೆ ಗೌರವ ಸೂಚಕವಾಗಿ ಅಕ್ಷತೆ ಕಾಳು ಹೂ ಶಿರದ ಮೇಲೆ ಹಾಕಿ ಹೆಸರಿನೊಂದಿಗೆ ಪಣಿಕರ್ ಎಂಬ ಗೌರವದೊಂದಿಗೆ ಘೋಷಣೆ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಅದ್ಯಕ್ಷರಾದ ಟಿ.ಕೆ.ರಾಜನ್ ಅವರು ಇದು ನಮಗಳಿಗೆ ಸುದಿನದ ಸಂದರ್ಭವಾಗಿದೆ. ದೇವಾಲಯ ದಲ್ಲಿ ನಡೆಯುವ ದೈವ ಕಾರ್ಯಗಳಿಗೆ ತನ್ನ ದೈವತ್ವವಾದ ಧಾರ್ಮಿಕ ಕಾರ್ಯ, ದೈವ ಕೋಲ ಕಟ್ಟುವ ಹಿರಿಯ ದೈವಕರ್ಮಿಯೋರ್ವರಿಗೆ ಪಣಿಕರ್ ಗೌರವ ಪದವಿ ಪ್ರದಾನ ಮಾಡುತ್ತಿರುವುದು ಸಂತಸ ತಂದಿದೆ. ಇದು ದೈವ ಇಚ್ಚೆಯಾಗಿದ್ದು.ದೇವಾಲಯ ಕ್ಕೆ ಮುಂದೆಯು ಶ್ರೀಯುತರ ಸೇವೆಯು ಮುಂದುವರೆಯುವಂತಾಗಲಿ ಎಂದು ಹೇಳಲು ಇಚ್ಚಿಸುತ್ತೇನೆ ಎಂದರು. ದೇವಾಲಯದ ಆಡಳಿತ ಮಂಡಳಿಯ ಗೌರವ ಅಧ್ಯಕ್ಷ ಗೋವಿಂದನ್.ಟಿ.ಎಸ್,ಉಪಾಧ್ಯಕ್ಷ ವಾಸು.ಸಿ.ಆರ್, ಕಾರ್ಯದರ್ಶಿಗಳಾದ ಪ್ರಭಾಕರನ್, ಆಡಳಿತ ಮಂಡಳಿ ಸದಸ್ಯರುಗಳಾದ ವಲ್ಸನ್, ಪ್ರಕಾಶ್ ಆಲಕಂಡಿ ದೇವಸ್ಥಾನದ ಉತ್ಸವ ಸಮಿತಿಯ ಸದಸ್ಯರುಗಳಾದ ಸುಮೇಶ್.ಪಿ.ಜಿ, ಬಾಬು.ಸಿ.ಆರ್,ಸೈಜು.ಎಂ.ಕೆ,ದಿನೇಶ್ ನಂಬಿಯಾರ್, ರಂಜಿತ್.ಟಿ.ಜಿ, ಜನಾರ್ದನ, ಗಣೇಶ್.ಟಿ.ಆರ್,ಸತೀಶ್, ಸಜೀ