


ಸೋಮವಾರಪೇಟೆ NEWS DESK ಮಾ.23 : ಜೇಸಿಐ ಪುಷ್ಪಗಿರಿ ಮಹಿಳಾ ಜೇಸಿ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಐವರು ಸಾಧಕರಿಗೆ ಮಹಿಳಾ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೇಸಿ ವಲಯ ನಿರ್ದೇಶಕಿ ಮಾಯಾ ಗಿರೀಶ್ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಸೈನಿಕರಾದ ಚಿಕ್ಕತೋಳೂರು ಗ್ರಾಮದ ಶಕುಂತಲ ಅವರಿಗೆ ಜೇಸಿ ರಕ್ಷರತ್ನ, ಗೌಡಳ್ಳಿ ಗ್ರಾಮದ ಜಿ.ಕೆ.ಲತಾ ಅವರಿಗೆ ಜೇಸಿ ಕೃಷಿರತ್ನ, ಸರ್ಕಾರಿ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ವಾಸಂತಿ ಅವರಿಗೆ ಆರೋಗ್ಯ ಸೇವಾ ರತ್ನ, ಬ್ಯಾಡಗೊಟ್ಟ ಸರ್ಕಾರಿ ಶಾಲೆಯ ಶಿಕ್ಷಕಿ ಎಂ.ಐ.ರಿಜ್ವಾನಾ ಭಾನು ಅವರಿಗೆ ವಿದ್ಯಾರತ್ನ, ರಾಷ್ಟ್ರಮಟ್ಟದ ಸೋಮವಾರಪೇಟೆಯ ಹಾಕಿ ಆಟಗಾರ್ತಿ ತಾನಿಯಾ ಅವರಿಗೆ ಜೇಸಿ ಖೇಲ್ ರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ ಜ್ಯೊತಿ ರಾಜೇಶ್, ಶನಿವಾರಸಂತೆಯ ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸುಜಲಾ ದೇವಿ, ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಹಾಗು ಜೇಸಿ ಸಂಸ್ಥೆಯ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್, ಮಾಜಿ ಅಧ್ಯಕ್ಷ ಎಸ್.ಆರ್.ವಸಂತ್ ಇದ್ದರು.