


ಮಡಿಕೇರಿ NEWS DESK ಮಾ.24 : ಭಾರತೀಯ ಭೂ ಸೇನಾ ದಕ್ಷಿಣ ವಲಯದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಧೀರಜ್ ಸೇತ್ ಪಿವಿಎಸ್‌ಎಂ, ಎವಿಎಸ್‌ಎಂ ಅವರು ಮಡಿಕೇರಿಯಲ್ಲಿರುವ ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದರು. ಸ್ಮಾರಕಕ್ಕೆ ಗೌರವ ಅರ್ಪಿಸಿದ ಅವರು ಸ್ಮಾರಕ ಭವನದಲ್ಲಿರುವ ತಿಮ್ಮಯ್ಯ ಅವರ ನೆನಪಿನ ಕುರುಹುಗಳನ್ನು ವೀಕ್ಷಿಸಿದರು. ಮೇಜರ್ ಬಿ.ಎ.ನಂಜಪ್ಪ ಈ ಸಂದರ್ಭ ಹಾಜರಿದ್ದರು.