




ಮಡಿಕೇರಿ ಮಾ.26 NEWS DESK : ಮಡಿಕೇರಿ ಎ.ಎಲ್.ಜಿ ಕ್ರೆಸೆಂಟ್ ಶಾಲೆಯ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಾಯಕ ಅಧಿಕಾರಿ ಸವಿತಾ ಕೀರ್ತನ್, ವಿದ್ಯಾರ್ಥಿಗಳನ್ನು ಅಭಿನಂದಿಸಿ, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯಕರ ಬೆಳವಣಿಗೆಯ ಮಹತ್ವವನ್ನು ಹೇಳಿದರು. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು. ಎಎಲ್‌ಜಿ ಕ್ರೆಸೆಂಟ್ ಆಡಳಿತ ಮಂಡಳಿಯ ಭಾತ್ಮಿದಾರ ಮುನೀರ್ ಅಹಮ್ಮದ್, ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಮತ್ತು ನಿರ್ದೇಶಕರಾದ ಲಿಯಾಕತ್, ಉಮರ್, ಖಜಾಂಚಿ ಫಯಾಜ್, ಪ್ರಾಂಶುಪಾಲರಾದ ಜಾಯ್ಸಿ ವಿನಯಾ ಮತ್ತು ಕೆ.ಜಿ ವಿಭಾಗದ ಸಂಯೋಜಕಿ ತಾಸಿನ್ ಸೇರಿದಂತೆ ಅತಿಥಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಬೇಬಿ ಅನೀನಾ, ಬೇಬಿ ಆಯಿರಾ ಸಜ್ಜತ್, ಬೇಬಿ ಅಲ್ಫಿಯ ಶೇಖ್ ನಿರೂಪಿಸಿದರು, ಬೇಬಿ ಮಿಥಾಲಿ ಸ್ವಾಗತಿಸಿದರು ಮತ್ತು ಬೇಬಿ ಧಾನ್ವಿ ವಂದಿಸಿದರು. ಪ್ರಿ-ಕೆಜಿ, ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಪ್ರತಿಭೆ ಪ್ರದರ್ಶಿಸಿದರು. ಪಠ್ಯೇತರ ಮತ್ತು ಕ್ರೀಡಾ ಚಟುವಟಿಕೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. 2025-26 ಶೈಕ್ಷಣಿಕ ವರ್ಷದ ಶಾಲಾ ಪ್ರವೇಶದ ಬಗ್ಗೆ ಸುಲ್ಹತ್ ವಿವರಗಳನ್ನು ನೀಡಿದರು. ಶಾಲೆಯು ಕೈಗೆಟುಕುವ ಶುಲ್ಕದಲ್ಲಿ ಸಿಬಿಎಸ್‌ಇ ಶಿಕ್ಷಣವನ್ನು ನೀಡುತ್ತದೆ, ಇದರಿಂದಾಗಿ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತದೆ.ಇದರ ಸದುಪಯೋಗ ವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಹಾಗೂ ದಾಖಲಾತಿಗಾಗಿ ಶಾಲಾ ಕಚೇರಿ ದೂರವಾಣಿ ಸಂಖ್ಯೆ 9353194571 ನ್ನು ಸಂಪರ್ಕಿಸಲು ತಿಳಿಸಿದರು.