




ಮಡಿಕೇರಿ ಮಾ.26 NEWS DESK : ನಗರದ ಪೀಲ್ಡ್ ಮಾಷ೯ಲ್ ಕಾಯ೯ಪ್ಪ ಕಾಲೇಜಿನ ಮೈದಾನದಲ್ಲಿ ಆಟಗಾರರಿಗೆ ಪ್ರಯೋಜನಕಾರಿಯಾಗಿ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ 1.80 ಲಕ್ಷ ರು. ವೆಚ್ಚದಲ್ಲಿ ನಿಮಿ೯ಸಲಾದ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ನಗರದ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಕಾಲೇಜು ಮೈದಾನದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ರೋಟರಿ ಜಿಲ್ಲೆ 3181 ನ ಗವನ೯ರ್ ವಿಕ್ರಂದತ್ತ ಲೋಕಾಪ೯ಣೆಗೊಳಿಸಿದರು. ನಂತರ ಸಮಾರಂಭದಲ್ಲಿ ಮಾತನಾಡಿದ ವಿಕ್ರಂದತ್ತ, ಕೊಡಗು ಜಿಲ್ಲೆಯಲ್ಲಿ ರೋಟರಿ ಸಂಸ್ಥೆಯು ಜನೋಪಯೋಗಿ ಕಾಯ೯ಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಂಡಿರುವುದು ಶ್ಲಾಘನೀಯ. ರೋಟರಿ ವುಡ್ಸ್ ಶುದ್ದ ಕುಡಿಯುವ ನೀರಿನ ಘಟಕದ ಮೂಲಕ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ ಎಂದು ಶ್ಲಾಘಿಸಿದರು. ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರು ಮಾತನಾಡಿ, 120 ವಷ೯ಗಳ ಸುಧೀಘ೯ ಇತಿಹಾಸವನ್ನು ಮನುಕುಲದ ಸೇವೆಯಲ್ಲಿ ಕಳೆದಿರುವ ರೋಟರಿ ಸಂಸ್ಥೆಯು ಜಗತ್ತಿನಾದ್ಯಂತ ಲಕ್ಷಾಂತರ ಯೋಜನೆಗಳೊಂದಿಗೆ ಮಾನವ ಸೇವೆಗೆ ಮುಂದಾಗಿದೆ. ಕಾಯ೯ಪ್ಪ ಕಾಲೇಜಿನ ಕ್ರೀಡಾಪಟುಗಳಿಗೆ ಅಗತ್ಯವಾದ ಶುದ್ದ ಕುಡಿಯುವ ನೀರಿನ ಘಟಕದ ಮೂಲಕ ರೋಟರಿ ತನ್ನ ಕಾಯ೯ಯೋಜನೆಯನ್ನು ಮತ್ತಷ್ಟು ಅಥ೯ಪೂಣ೯ವಾಗಿಸಿದೆ ಎಂದು ಪ್ರಶಂಶಿಸಿದರು. ವಿದ್ಯಾಥಿ೯ಗಳು ಈ ಘಟಕದ ಪ್ರಯೋಜನವನ್ನು ಪಡೆದುಕೊಳ್ಳುವಂತೆಯೂ ಅವರು ಕರೆ ನೀಡಿದರು. ಕಾಯ೯ಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ರಾಘವ ಮಾತನಾಡಿ, ಕಾಯ೯ಪ್ಪ ಕಾಲೇಜಿನ ಅನೇಕ ಬೇಡಿಕೆಗಳನ್ನು ರೋಟರಿ ಸಂಸ್ಥೆಗಳು ಈಡೇರಿಸುವ ಮೂಲಕ ನೈಜವಾದ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿದೆ. ಹಳ್ಳಿಹಳ್ಳಿಗೂ ರೋಟರಿ ತನ್ನ ಸದಸ್ಯರ ಮೂಲಕ ಸಹಾಯ ಯೋಜನೆ ಕೈಗೊಳ್ಳುವುದರೊಂದಿಗೆ ಗಾಂಧೀಜಿಯವರ ರಾಮರಾಜ್ದದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದು ಶ್ಲಾಘಿಸಿದರು. ರೋಟರಿ ವುಡ್ಸ್ ಅಧ್ಯಕ್ಷ ಕಿಗ್ಗಾಲು ಹರೀಶ್ ಮಾತನಾಡಿ, ಕಾಯ೯ಪ್ಪ ಕಾಲೇಜಿನ ಕ್ರೀಡಾಳುಗಳಿಗೆ ಮೈದಾನದಲ್ಲಿ ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡು ರೋಟರಿ ವುಡ್ಸ್ 100 ದಿನಗಳಲ್ಲಿಯೇ ಸದಸ್ಯರು, ಉಪನ್ಯಾಸಕ ವಗ೯ದ ಸಹಕಾರದೊಂದಿಗೆ 1.80 ಲಕ್ಷ ರು. ಮೌಲ್ಯದ ಕುಡಿಯುವ ನೀರಿನ ಘಟಕದ ಯೋಜನೆ ಪೂಣ೯ಗೊಳಿಸಿದೆ ಎಂದರು. ರೋಟರಿ ವಲಯ 6 ರ ಸಹಾಯಕ ಗವ೯ನರ್ ದೇವಣಿರ ಕಿರಣ್, ಈ ಕಾಲೇಜಿಗೆ ಮೊದಲು ಮತ್ತು ಕೊನೇ ಸಲ 1983 ರಲ್ಲಿ ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಅವರು ಕಾಯ೯ಕ್ರಮಕ್ಕೆ ಬಂದ ಘಟನೆಯನ್ನು ಸ್ಮರಿಸಿಕೊಂಡು ಶಿಸ್ತು, ಮತ್ತು ಸಮಯಪಾಲನೆ ಬಗ್ಗೆ ಕಾಯ೯ಪ್ಪ ಅವರ ಕಾಳಜಿಯನ್ನು ವಿವರಿಸಿದರು. ಕಾಯ೯ಕ್ರಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕದ ಯೋಜನಾ ನಿದೇ೯ಶಕ ರಾಜೇಶ್ ಚೌಧರಿಯವರನ್ನು ಸನ್ಮಾನಿಸಲಾಯಿತು. ರೋಟರಿ ವುಡ್ಸ್ ಕಾಯ೯ದಶಿ೯ ಕಿರಣ್ ಕುಂಧರ್ ವಂದಿಸಿದ ಕಾಯ೯ಕ್ರಮವನ್ನು ವಸಂತ್ ಕುಮಾರ್ ನಿವ೯ಹಿಸಿದರು. ರೋಟರಿ ಜಿಲ್ಲಾ ಕಾಯ೯ದಶಿ೯ ರಿತೇಶ್ ಬಾಳಿಗ ಮಾಜಿ ಸಹಾಯಕ ಗವನ೯ರ್ ದೇವಣಿರ ತಿಲಕ್, ಕೊಡಗು ಪತ್ರಕತ೯ರ ಸಂಘ(ರಿ) ಅಧ್ಯಕ್ಷ ಅನಿಲ್ ಹೆಚ್.ಟಿ. , ರೋಟರಿ ಸದಸ್ಯರು, ಕಾಲೇಜಿನ ಬೋಧಕ, ಬೋದಕೇತರ ವಗ೯ದವರು ವಿದ್ಯಾಥಿ೯ ಸಂಘದ ಪದಾಧಿಕಾರಿಗಳು ಹಾಜರಿದ್ದರು.