





ಮಡಿಕೇರಿ ಮಾ.28 NEWS DESK : ನಗರದ ನಾಲ್ಕು ಶಕ್ತಿದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ದೈವಕೋಲ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಎರಡು ದಿನಗಳ ಕಾಲ ದೇವಾಲಯದಲ್ಲಿ ವಿವಿಧ ವಿಶೇಷ ಪೂಜಾಕೈಂಕರ್ಯಗಳೊಂದಿಗೆ ಶ್ರೀ ವಿಷ್ಣುಮೂರ್ತಿ (ತೀ ಚಾಮುಂಡಿ), ರಕ್ತೇಶ್ವರಿ (ರಕ್ತ ಚಾಮುಂಡಿ), ಕುಟ್ಟಿಶಾಸ್ತಾನ್, ಉಚ್ಚಿಟ್ಟ ವೀರನ್ (ಗುರು) ಗುಳಿಗನ್, ಭೂತಂ (ನಕ್ಕಿಚ್ಚು), ಪಾಷಾಣಮೂರ್ತಿ (ಕಲ್ಲುಟ್ರ್ಟಿ) ಮತ್ತು ಅಜ್ಜಪ್ಪ ತೆರೆಗಳ ದೈವಕೋಲ ನಡೆಯಿತು. ಇಂದು ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಮೇಲೇರಿ ಮತ್ತು ರಕ್ತೇಶ್ವರಿ ದೈವಕೋಲ ಉತ್ಸವ ಜರುಗಿತು. ನೆರೆದಿದ್ದ ಭಕ್ತಾಧಿಗಳಿಗೆ ರಾತ್ರಿ ಅನ್ನದಾನ ನೆರವೇರಿತು. ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಆಡಳಿತ ಮಂಡಳಿ ಟ್ರಸ್ಟಿಗಳುಗಳು ಪಾಲ್ಗೊಂಡಿದ್ದರು. ನಗರದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.