





ಮಡಿಕೇರಿ ಮಾ.29 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಅಮ್ಮತ್ತಿ ಕೊಡವ ಸಮಾಜದ ಸಹಯೋಗದಲ್ಲಿ ಎರಡು ದಿನಗಳ ಕಾಲ ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆಯುವ ಕೊಡವ ಬಲ್ಯನಮ್ಮೆ (ಕೊಡವ ಅಕಾಡೆಮಿ ಗೌರವ ಪ್ರಶಸ್ತಿ, ಪುಸ್ತಕ ಪ್ರಶಸ್ತಿ ಮತ್ತು ದುಡಿ-ತಾಳ ಕೊಡ್‍ಪ ಆಯಿಮೆ) ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ಹೊಸೂರು ಜಂಕ್ಷನ್‍ನಿಂದ ಕೊಡವ ಸಮಾಜದವರೆಗೆ ಕೊಡವ ಸಾಂಸ್ಕೃತಿಕ ಜಾನಪದ ಮೆರವಣಿಗೆ ನಡೆಯಿತು. ಅಮ್ಮತ್ತಿ ನಾಡಿನ ಹಿರಿಯರು ಹಾಗೂ ಸಮಾಜ ಸೇವಕ ನೆಲ್ಲಮಕ್ಕಡ ಶಂಭು ಸೋಮಯ್ಯ, ಕಾವಾಡಿಚಂಡ ಯು.ಗಣಪತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ ಇದ್ದರು.